ಕ್ರಿಸ್ಮಸ್ ಕಳೆದರೂ ಸಂಭ್ರಮ ಇನ್ನು ಕಡಿಮೆ ಆಗಿಲ್ಲ. ನಟಿ ತಪಸ್ವಿನಿ ಪೂಣಚ್ಚ, ಕ್ರಿಸ್ಮಸ್ಗಾಗಿ ಹೊಸ ಫೋಟೋ ಶೂಟ್ ಮಾಡಿಸಿದ್ದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತಪಸ್ವಿನಿ ಪೂಣಚ್ಚ, ಕನ್ನಡದಲ್ಲಿ ರಿಷಬ್ ಶೆಟ್ಟಿ ಜೊತೆ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೇ ವರ್ಷ ಜೂನ್ನಲ್ಲಿ ಈ ಸಿನಿಮಾ ತೆರೆ ಕಂಡಿತ್ತು.
ತಪಸ್ವಿನಿ ಪೂಣಚ್ಚ ಮೂಲತ: ಕೊಡಗಿನವರು. ನನಗೆ ಸಿನಿಮಾ ನಟಿಯಾಗಬೇಕೆಂಬ ಆಸೆ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಫೋಟೋ ನೋಡಿದ ಚಿತ್ರತಂಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದೆ ಎಂದಿದ್ದಾರೆ.
ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ನಟಿಸುತ್ತಿದ್ದಂತೆ ‘ಗಜರಾಮ’ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಒಳ್ಳೆ ಅವಕಾಶಗಳು ದೊರೆತರೆ ಚಿತ್ರರಂಗದಲ್ಲೇ ಮುಂದುವರೆಯುತ್ತೇನೆ ಎಂದು ತಪಸ್ವಿನಿ ಹೇಳಿದ್ದಾರೆ.

Be the first to comment