ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ ಹಾಗೂ ಕನ್ನಡದ ಹೆಸರಾಂತ ಸಾಹಸ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿರುವ ಪ್ರವೀಣ್ “ಠಾಣೆ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ವಿದೂಷಿ ಹರಿಣಾಕ್ಷಿ , ಬಿ.ವಿ.ರಾಜರಾಂ, ಬಾಲ್ ರಾಜ್ವಾಡಿ, ರೋಹಿತ್ ನಾಗೇಶ್, ಕುಲದೀಪ್, ಸಂತೋಷ್ ಕರ್ಕಿ, ಭೀಷ್ಮ ರಾಮಯ್ಯ, ನಾಗರಾಜ್, ಪಿ.ಡಿ.ಸತೀಶ್ ಚಂದ್ರ, ಪ್ರವೀಣ್ ಜಾನ್, ಪೂಜಾ ರಾವ್ . ರೂಪ .ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
20 ವರ್ಷಗಳ ಹಿಂದೆ ಮಾಧ್ಯಮಗಳು, ಪೋಲೀಸ್ ಇಲಾಖೆಗಳ ಪ್ರಮಾಣ ಕಡಿಮೆ ಇದ್ದ ಕಾರಣ ಜನರೇ ನ್ಯಾಯಕ್ಕಾಗಿ ಹೋರಾಡಿ ಇಲಾಖೆಗಳ ಗಮನ ಸೆಳೆಯುವ ಕಾಲದಲ್ಲಿ ನಾಯಕ ಕಾಳಿ ನ್ಯಾಯಕ್ಕಾಗಿ ಯಾವ ರೀತಿಯ ಹೋರಾಟ ಮಾಡಿದ ಎನ್ನುವುದೇ ಠಾಣೆ C/O ಶ್ರೀರಾಂಪುರ.. ಹಾಗೆ ಹಳೆಯ ಕಟ್ಟಡ ಗಳು ಸ್ಥಳ ಗಳು ಹುಡುಕಿ ಚಿತ್ರಿಕರಣ ಮಾಡಲಾಗಿದೆ ಎಂದು ಕಥೆ ಬರೆದು ನಿರ್ದೇಶನ ಮಾಡಿರುವ ಎಸ್. ಭಗತ್ ರಾಜ್ ತಿಳಿಸಿದ್ದಾರೆ.
ಮೂರು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ. ಮಜಾ ಟಾಕೀಸ್ ರೇಮೋ ಹಾಡುಗಳ ರಚನೆ ಮಾಡಿದ್ದು, ರಾಜೇಶ್ ಕೃಷ್ಣ, ಮಾನಸ ಹೊಳ್ಳ ಹಾಗೂ ರಿಯಾಲಿಟಿ ಶೋ ನಾ ಮಕ್ಕಳು ಹಾಡಿ ಗಮನ ಸೆಳೆದಿದ್ಧಾರೆ. ಪ್ರಶಾಂತ್ ಸಾಗರ್ ಛಾಯಾಗ್ರಹಣ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಸಂಕಲನ, ಸಹ ನಿರ್ದೇಶನ ದಾವಣಗೆರೆ ರವಿಚಂದ್ರ, ನಿರ್ಮಾಣ ನಿರ್ವಹಣೆ ರವಿಚಂದ್ರ ಅವರದ್ದು ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವು ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರು ಭರ್ಜರಿ ಯಾಗಿ ಆಕ್ಷನ್ ಮಾಡಿದ್ದಾರೆ.
ಇದೆ ಮಾರ್ಚ್ ತಿಂಗಳಲ್ಲಿ ಲೇಖ ಆಡಿಯೋ ಸಂಸ್ಥೆ ಯಿಂದ ಠಾಣೆ ಧ್ವನಿ ಸುರುಳಿ ಬಿಡುಗಡೆ.

Be the first to comment