ಥಮ

“ಥಮ” ಚಿತ್ರದ ಟೀಸರ್ ಬಿಡುಗಡೆ

ರಶ್ಮಿಕಾ ಮಂದಣ್ಣ ಅಭಿನಯದ ಹಾರರ್–ಕಾಮಿಡಿ–ಥ್ರಿಲ್ಲರ್ ಸಿನಿಮಾ ‘ಥಮ’ದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.

ಗ್ಲಾಮರಸ್ ಹಾಗೂ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಈ ಬಾರಿ ವಿಭಿನ್ನ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ “ತಾಡಾಕಾ” ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ.

ಆಯುಷ್ಮಾನ್ ಖುರಾನಾ, ಪರೇಶ್ ರಾವಲ್, ನವಾಜುದ್ದೀನ್ ಸಿದ್ಧಿಖಿ ಸೇರಿದಂತೆ ಹಲವರ ತಾರಾಗಣ ಈ ಚಿತ್ರದಲ್ಲಿದೆ. ಮ್ಯಾಡ್ಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಈ ಸಂಸ್ಥೆ ಹಿಂದೆ ಹಲವಾರು ಯಶಸ್ವಿ ಹಾರರ್ ಸಿನಿಮಾಗಳನ್ನು ನಿರ್ಮಿಸಿದೆ.

ರಶ್ಮಿಕಾ ಅಭಿನಯದ ಪುಷ್ಪ 2 ಮತ್ತು ಛಾವಾ ಸಿನಿಮಾಗಳ ನಂತರದ ಈ ಹೊಸ ಪ್ರಯತ್ನ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ‘ಥಮ’ ಸಿನಿಮಾ ದೀಪಾವಳಿ ಸಂದರ್ಭ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಅವರು ನಂತರ ದಕ್ಷಿಣದ ಚಿತ್ರಗಳಲ್ಲಿ ಮಿಂಚಿದರು. ಈಗ ಅವರು ಹಿಂದಿ ಚಿತ್ರಗಳಲ್ಲಿ ಸಾಕಷ್ಟು ಮಿಂಚುತ್ತಿದ್ದಾರೆ.

ಹಾರರ್ ಚಿತ್ರದಲ್ಲಿ ಯಾವ ರೀತಿ ರಶ್ಮಿಕಾ ನಟಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!