ರಶ್ಮಿಕಾ ಮಂದಣ್ಣ ಹಾಗೂ ಆಯುಷ್ಮಾನ್ ಖುರಾನಾ ನಟನೆಯ ‘ಥಮ’ ಸಿನಿಮಾ ಮೊದಲ ದಿನವೇ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಭರ್ಜರಿ ಕಲೆಕ್ಷನ್ ಮಾಡಿದೆ.
ಹಾರರ್ ಕಾಮಿಡಿ ಶೈಲಿಯ ‘ಥಮ’ ಸಿನಿಮಾ ಮೊದಲ ದಿನ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಗೆದ್ದಿದೆ. ‘ಥಮ’ ಸಿನಿಮಾ ಅಕ್ಟೋಬರ್ 21ರಂದು ರಿಲೀಸ್ ಆಯಿತು. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ರಿಲೀಸ್ ಆಗುತ್ತವೆ. ಆದರೆ ‘ಥಮ’ ಚಿತ್ರತಂಡ ಮಂಗಳವಾರ ಚಿತ್ರವನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿದೆ.
ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ‘ಅನಿಮಲ್’, ‘ಛಾವ’ ಸಿನಿಮಾ ಗೆಲುವು ಕಂಡಿವೆ. ‘ಸಿಕಂದರ್’ ಸಿನಿಮಾ ಸಾಧಾರಣ ಎನಿಸಿಕೊಂಡಿತು. ಈಗ ‘ಥಮ’ ಮೂಲಕ ರಶ್ಮಿಕಾ ಗೆದ್ದಿದ್ದಾರೆ. ಸೋಲನ್ನೇ ಹೆಚ್ಚು ಕಂಡ ಆಯುಷ್ಮಾನ್ ಕೂಡ ಈ ಸಿನಿಮಾ ಮೂಲಕ ಗೆದ್ದಿದ್ದಾರೆ.
‘ಮುಂಜ್ಯ’, ‘ಕುಕುಡ’ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದ ದಿನೇಶ್ ವಿಜನ್ ಅವರ ‘ಮ್ಯಾಡಾಕ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
—–





Be the first to comment