ಪುಷ್ಪ-2 ಸಿನಿಮಾದ ಪ್ರೀಮಿಯರ್ ವೇಳೆ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಗರಂ ಆಗಿದ್ದಾರೆ.
ಈ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎಂಐಎಂ ಸದಸ್ಯ ಅಕ್ಬರುದ್ದೀನ್ ಒವೈಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇವಂತ್ ರೆಡ್ಡಿ, ಅವನಿಗೆ ಮನುಷ್ಯತ್ವ ಏನಾದ್ರೂ ಇದ್ಯಾ ಎಂದು ಪ್ರಶ್ನಿಸಿದ್ದಾರೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಹೊರಗೆ ಕರೆದುಕೊಂಡು ಬಂದು ಗಾಡಿ ಹತ್ತಿಸಿದ್ರೆ ಮತ್ತೆ ರೂಫ್ ಟಾಪ್ ಓಪನ್ ಮಾಡಿ, ಕೈ ಬೀಸುತ್ತಾ ರೋಡ್ಶೋ ಮಾಡ್ಕೊಂಡು ಹೋದ್ರು. ಒಬ್ಬ ತಾಯಿ ಸಾವನ್ನಪ್ಪಿದ್ದು, ಮಗ ಗಂಭೀರವಾಗಿದ್ರೂ ಹಿಂದಕ್ಕೆ ಹೋಗಿ ಅಂದ್ರೂ ಮತ್ತೆ ಅಭಿಮಾನಿಗಳಿಗೆ ಕೈ ಬೀಸುತ್ತಾ ರೋಡ್ ಶೋ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಮಾನಿ ಸತ್ತರೂ ಅಲ್ಲು ಅರ್ಜುನ್ ತಲೆ ಕೆಡಿಸಿಕೊಳ್ಳಲಿಲ್ಲ. ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನ ಮೆದುಳು ನಿಷ್ಕ್ರಿಯವಾಗಿದೆ. ಮಹಿಳೆ ಸತ್ತು, ಮಗು ಸಾವು-ಬದುಕಿನ ನಡುವೆ ಹೋರಾಡ್ತಿದ್ರೂ ಆತ ಸಿನಿಮಾ ನೋಡಿಯೇ ಆಚೆ ಬಂದಿದ್ದಾನೆ. ಮನುಷ್ಯತ್ವ ಇದ್ಯಾ ಎಂದು ಪ್ರಶ್ನಿಸಿದ್ದಾರೆ.
ಹೀರೋ ಆಗಲಿ, ಪ್ರೊಡ್ಯೂಸರ್ ಆಗಲಿ ಮೃತ ಕುಟುಂಬಕ್ಕೆ ಅಥವಾ ಆಸ್ಪತ್ರೆಯಲ್ಲಿ ಮಗ ಗಂಭೀರದಲ್ಲಿದ್ರೂ ಹೋಗಲಿಲ್ಲ. ಇದ್ಯಾವ ಮನುಷ್ಯತ್ವ ಅಂತ ನನಗೆ ಅರ್ಥವಾಗ್ತಿಲ್ಲ. ಈ ರೀತಿ ಮನುಷ್ಯತ್ವ ಇಲ್ಲದ ವ್ಯಕ್ತಿಯನ್ನ ಪೊಲೀಸರು ಕರೆದುಕೊಂಡು ಬಂದ್ರೆ ಕೆಲ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.
ರೇವಂತ್ ರೆಡ್ಡಿ ಆಡಿದ ಮಾತಿಗೆ ಅಲ್ಲು ಅರ್ಜುನ್ ತಿರುಗೇಟು ನೀಡಿದ್ದಾರೆ. ಇದು ಅವಮಾನಕರ ಮತ್ತು ಚಾರಿತ್ರ್ಯ ವಧೆ. ದಯವಿಟ್ಟು ನನ್ನ ಬಗ್ಗೆ ಜಡ್ಜ್ ಮಾಡಬೇಡಿ ಎಂದು ವಾರ್ನಿಂಗ್ ಮಾಡಿದ್ದಾರೆ. ಕಾಲ್ತುಳಿತ ಪ್ರಕರಣಕ್ಕೆ ಕ್ಷಮೆಯಾಚಿಸಿದ್ದಾರೆ.
Be the first to comment