ಹಾರರ್, ರೋಮ್ಯಾಂಟಿಕ್ ಕತೆ ಹೊಂದಿರುವ ’ಟೆಡ್ಡಿ ಬೇರ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ಭರತ್‌ಕುಮಾರ್-ನವೀನ್‌ರೆಗಟ್ಟಿ ಜಂಟಿಯಾಗಿ ಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಿಡಿ ಬಿಡುಗಡೆ ಮಾಡಿದ ಡಾ.ನಾಗೇಂದ್ರಪ್ರಸಾದ್ ಮಾತನಾಡಿ ಚಿತ್ರರಂಗದ ಏಳಿಗೆಗೆ ಬಾ.ಮ.ಹರೀಶ್, ಉಮೇಶ್‌ಬಣಕಾರ್ ಸದಾ ಸಿದ್ದರಿರುತ್ತಾರೆ. ಗ್ಯಾಪ್ ನಂತರ ಚಟುವಟಿಕೆಗಳು ಶುರುವಾಗುತ್ತಿದೆ. ಬಿಡುಗಡೆಯಾಗ ಬೇಕಾದ ಸಿನಿಮಾಗಳು ಸಾಕಷ್ಟು ಇದೆ. ಯಾವ ಚಿತ್ರಗಳು ಬಲಿಯಾಗಬಾರದು. ನಿರ್ಮಾಪಕರು ತಾಳ್ಮೆಯಿಂದ ನಿಧಾನವಾಗಿ ತೆರೆಗೆ ತರುವುದು ಶ್ರೇಯ. ಹೊಸ ತಂಡದವರಿಗೆ ಒಳ್ಳೆಯದಾಗಲಿ. ಬಂಡವಾಳ ವಾಪಸ್ಸು ಬರಲೆಂದು ಶುಭಹಾರೈಸಿದರು. ಬಾ.ಮ.ಹರೀಶ್ ಮತ್ತು ಉಮೇಶ್‌ಬಣಕಾರ್ ಇವರ ಮಾತಿಗೆ ಧ್ವನಿಗೂಡಿಸಿದರು.
ನವ ದಂಪತಿಗಳು ಮದುವೆಯಾದ ಸಂದರ್ಭದಲ್ಲಿ ಅದ್ಬುತವಾದ ಹೊಸ ಮನೆಗೆ ಹೋದಾಗ, ವಿಶಿಷ್ಟ, ವಿಚಿತ್ರ, ವಿನೋಧ ಹಾಗೂ ಭಯಾನಕವಾದ ಸನ್ನಿವೇಶಗಳು ಎದುರಾಗುತ್ತದೆ. ಅಲ್ಲಿ ನಡೆಯುವಂತ ಘಟನೆಗಳು ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕೆಂದು ಮೂರು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ಸಹ ನಿರ್ಮಾಪಕರಾಗಿರುವ ಆರೋನ್‌ಕಾರ್ತಿಕ್ ಚಿತ್ರದ ಏಳೆಯನ್ನು ತೆರೆದಿಟ್ಟರು. ಟಾಲಿವುಡ್‌ದಲ್ಲಿ ಸ್ಟಾರ್ ನಿರ್ದೇಶಕ ಪೂರಿಜಗನ್ನಾಥ್ ಅವರಲ್ಲಿ ಅನುಭವ ಪಡೆದುಕೊಂಡಿರುವ ಲೋಕೇಶ್.ಬಿ ರಚಿಸಿ, ಆಕ್ಷನ್ ಕಟ್ ಹೇಳಿದ್ದು, ಶೇಕಡ ೮೦ರಷ್ಟು ಚಿತ್ರೀಕರಣವು ಬೆಂಗಳೂರು, ಮಂಗಳೂರು, ಕುಶಾಲನಗರದಲ್ಲಿ ನಡೆದಿದೆ ಎಂದು ಹೇಳಿ, ಪ್ರಶ್ನೆಗಳಿಂದ ಜಾರಿಕೊಂಡರು.
ಭಗವದ್ಗಿತೆ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದು, ಸೈಕಾಲಜಿ ಕೌನ್ಸಿಲರ್ ಪಾತ್ರದಲ್ಲಿ ಭಾರ್ಗವ್ ನಾಯಕನಗಿ ಮೂರನೆ ಅವಕಾಶ. ಕ್ರೈಂ ಪತ್ರಕರ್ತೆಯಾಗಿ ಲಿಖಿತಾ, ಪತ್ನಿಯಾಗಿ ಶೈಲಜಾಸಿಂಹ ನಾಯಕಿಯರು.
ತಾರಗಣದಲ್ಲಿ ನಿಖಿಲ್, ವಿಘ್ನೇಶ್, ನವೀನ್‌ಪಾಟೀಲ್, ಅಂಜಲಿ, ಅರವಿಂದ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಕೃಷ್ಣಸಾರಥಿ-ನಿಖಿಲ್, ಸಂಕಲನ ಕುಮಾರ್-ನಾಗರಾಜ್, ಸಂಭಾಷಣೆ ಲೋಕೇಶ್-ಅಜಿತ್-ಭಾರ್ಗವ, ಸಾಹಸ ಅಲ್ಟಿಮೇಟ್‌ಶಿವು, ಚಿತ್ರಕತೆ ನಿಖಿಲ್-ಮಂಜುಕಿರಣ್ ಅವರದಾಗಿದೆ. ಸಿರಿ ಮ್ಯೂಸಿಕ್ ಸಂಸ್ಥೆಯು ಆಡಿಯೋ ಸಿಡಿಯನ್ನು ಹೊರ ತಂದಿದೆ. ಇದಕ್ಕೂ ಮುನ್ನ ಅನುರಾಧಭಟ್ ಗಾಯನದ ಲಿರಿಕಲ್ ವಿಡಿಯೋ ಹಾಡು ಮತ್ತು ಮೋಷನ್ ಪೋಸ್ಟರ್ ತೆರೆ ಮೇಲೆ ಕಾಣಿಸಿಕೊಂಡಿತು.
Be the first to comment