Tatsama Tadbhava Review : ಮುದ ನೀಡುವ ಸೈಕಾಲಜಿಕಲ್ ಥ್ರಿಲ್ಲರ್ ತತ್ಸಮ ತದ್ಭವ

ಸಿನಿಮಾ: ʼತತ್ಸಮ ತದ್ಭವʼ

ನಿರ್ದೇಶನ: ವಿಶಾಲ್ ಆತ್ರೇಯ
ತಾರಾಗಣ: ಮೇಘನಾ ರಾಜ್‌, ಪ್ರಜ್ವಲ್ ದೇವರಾಜ್, ಬಾಲಾಜಿ ಮನೋಹರ್‌, ಶ್ರುತಿ, ಮಹತಿ ಇತರರು.

ರೇಟಿಂಗ್: 4/5

ನಾಲ್ಕು ವರ್ಷಗಳ ನಂತರ ನಟಿ ಮೇಘನಾ ರಾಜ್‌ ʼತತ್ಸಮ ತದ್ಭವʼ ಮೂಲಕ ಪುನಾರಾಗಮನ ಮಾಡಿದ್ದಾರೆ. ಇದು ಸೈಕಾಲಜಿಕಲ್ ಕ್ರೈಮ್ ಥ್ರಿಲ್ಲರ್ ಎನ್ನುವ ಕಾರಣಕ್ಕೆ ವೀಕ್ಷಕರ ಗಮನ ಸೆಳೆಯುತ್ತದೆ.

ಸಿನಿಮಾ ಪತಿ ನಾಪತ್ತೆಯಾದ ನಂತರ ಪೊಲೀಸ್‌ರಿಂದ ಸಹಾಯ ಪಡೆಯುವ ಮಹಿಳೆಯ ಕುರಿತಾದ ಕಥೆ ಹೊಂದಿದೆ. ಈ ನಡುವೆ ಅರಿಕಾ ( ಮೇಘನಾ ರಾಜ್ ) ಆಘಾತಕಾರಿ ಪರಿಸ್ಥಿತಿಗಳನ್ನು ಎದುರಿಸುವ ಸನ್ನಿವೇಶ ಇಲ್ಲಿದೆ.

ಅನುಭವಿ ಪೊಲೀಸ್ ಇನ್ಸ್‌ಪೆಕ್ಟರ್ ರಹಸ್ಯ, ಸುಳ್ಳು ಮತ್ತು ನಿಗೂಢತೆಯ ಜಾಲವನ್ನು ಬಹಿರಂಗಪಡಿಸುವ, ಗೊಂದಲಕ್ಕೊಳಗಾದ ಕಾಣೆಯಾದ ವ್ಯಕ್ತಿಯ ತನಿಖೆಯನ್ನು ಪರಿಶೀಲಿಸುವ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದಾರೆ.

ಪ್ರಜ್ವಲ್‌ ದೇವರಾಜ್ ಅವರು ಅರವಿಂದ್ ಅಶ್ವತ್ಥಾಮನ ಪಾತ್ರದ ಮೂಲಕ ಉನ್ನತ ಮಟ್ಟದ ಪೋಲೀಸ್ ವಿಚಾರಣೆಯ ಕಾರ್ಯವಿಧಾನಗಳ ಚಿತ್ರಣದಲ್ಲಿ ಜೀವ ತುಂಬಿದ್ದಾರೆ. ಇದು ಪ್ರಜ್ವಲ್ ದೇವರಾಜ್ ಅವರು ಇದುವರೆಗೆ ನಿರ್ವಹಿಸಿದ ಪಾತ್ರಗಳಲ್ಲಿ ವಿಭಿನ್ನ ಎನಿಸಿದೆ.

ಅರಿಕಾ ಪಾತ್ರಕ್ಕೆ ಮೇಘನಾ ರಾಜ್ ಪರ್ಫೆಕ್ಟ್ ಅನಿಸುತ್ತಾರೆ. ಚಿತ್ರದಲ್ಲಿ ಬಾಲಾಜಿ ಮನೋಹರ್‌, ಶ್ರುತಿ, ಮಹತಿ, ಗಿರಿಜಾ ಲೋಕೇಶ್‌, ಅರವಿಂದ ಅಯ್ಯರ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಗಳಿಗೆ ಅವರು ಜೀವ ತುಂಬುವ ಯತ್ನ ಮಾಡಿದ್ದಾರೆ.

ವಿಶಾಲ್ ಆತ್ರೇಯ ಅವರು ತತ್ಸಮ ತದ್ಭವವನ್ನು ನಿರ್ದೇಶಿಸಿ ಚಿತ್ರಕಥೆ ಬರೆದಿದ್ದಾರೆ. ಅವರು ಸಾಕಷ್ಟು ಬುದ್ಧಿವಂತಿಕೆಯಿಂದ ಸ್ಕ್ರಿಪ್ ರಚಿಸಿದ್ದಾರೆ. ಅವರು ಕಥೆ ಹೇಳುವ ವಿಧಾನದಲ್ಲಿ ಸಾಕಷ್ಟು ಜಟಿಲತೆಯನ್ನು ಅನುಸರಿಸಿದ್ದಾರೆ.

ವಾಸುಕಿ ವೈಭವ್ ಸಂಗೀತ ಸಂಯೋಜನೆ ಮನಸಿಗೆ ಹಿತವಾಗಿದೆ. ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ತತ್ಸಮ ತದ್ಭವ ಚಿತ್ರ ಖುಷಿ ನೀಡಬಹುದು.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!