ಜುಲೈ 3ರಂದು ‘ತಪಸ್ಸಿ’ ಬಿಡುಗಡೆ

ಮಹಿಳಾ ಪ್ರಧಾನ ಚಿತ್ರ ‘ತಪಸ್ಸಿ’ ಜುಲೈ 3ರಂದು ರಾಜ್ಯದ್ಯಂತ ಬಿಡುಗಡೆ ಆಗಲಿದೆ.

ಬೆಂಗಳೂರು ಮೂವೀಸ್ ಲಾಂಛನದಲ್ಲಿ ಚಿತ್ರ ಮೂಡಿ ಬರುತ್ತಿದೆ. ಸಿನಿಮಾಗೆ ಸ್ಪೆನ್ಸರ್ ಮ್ಯಾಥ್ಯೂ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವಿ ರವಿಚಂದ್ರನ್ ಅವರು ಚಿತ್ರದಲ್ಲಿ ಪ್ರೊಫೆಸರ್ ಆಗಿ ನಟಿಸುತ್ತಿದ್ದಾರೆ.

ನಿರ್ದೇಶಕ ಮ್ಯಾಥ್ಯೂ ಅವರು, ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಸಿನಿಮಾದಲ್ಲಿ ಸ್ಟ್ರಾಂಗ್ ಮೆಸೇಜ್ ಇದೆ. ರವಿಚಂದ್ರನ್ ಅವರಿಂದ ಮಾತ್ರ ಅದು ತಲುಪಿಸಲು ಸಾಧ್ಯ ಎನ್ನುವ ಭಾವನೆಯಿಂದ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ರವಿಚಂದ್ರನ್ ಅವರು, ‘ ನಿರ್ದೇಶಕರ ಒತ್ತಾಯದ ಮೇರೆಗೆ ಸಿನಿಮಾ ಒಪ್ಪಿಕೊಂಡೆ. ಇದು ಸಾಮಾಜಿಕ ಸಂದೇಶ ಸಾರುವ ಚಿತ್ರ’ ಎಂದಿದ್ದಾರೆ.

ಚಿತ್ರದಲ್ಲಿ ಅಮ್ಮಯ್ರ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ. ವಿನಯ ಪ್ರಸಾದ್, ಪ್ರಜ್ವಲ್, ಸಚಿನ್, ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರವನ್ನು ಶೂಟಿಂಗ್ ಮಾಡಲಾಗಿದೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!