ಬಾಲಿವುಡ್ ನಟಿ ತನುಶ್ರೀ ದತ್ತಾ ಹಾಗೂ ನಟ ನಾನಾ ಪಾಟೇಕರ್ ವಿವಾದ ಚರ್ಚೆಯ ವಿಷ್ಯವಾಗಿದೆ. ಪ್ರಕರಣ ಬಯಲಿಗೆ ಬರ್ತಿದ್ದಂತೆ ಅನೇಕ ಬಾಲಿವುಡ್ ಸ್ಟಾರ್ ಗಳು ತನುಶ್ರೀ ಬೆಂಬಲಕ್ಕೆ ನಿಂತಿದ್ದಾರೆ. ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕನ ಪತ್ನಿ ಅನುಷ್ಕಾ ಶರ್ಮಾ ಕೂಡ ತನುಶ್ರೀಗೆ ಬೆಂಬಲ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ತನುಶ್ರೀ, ಕೆಲಸ ಮಾಡುವ ಜಾಗ ಸುರಕ್ಷಿತವಾಗಿರುತ್ತದೆ. ಆದ್ರೆ ಸುರಕ್ಷಿತ ಎಂದುಕೊಂಡ ಜಾಗದಲ್ಲಿಯೇ ಮಹಿಳೆ ಜೊತೆ ಇಂಥ ಘಟನೆ ನಡೆದ್ರೆ ದುಃಖವಾಗುತ್ತದೆ. ತನುಶ್ರೀ ದತ್ತಾ ತಮ್ಮ ಮೇಲಾದ ಲೈಂಗಿಕ ಕಿರುಕುಳ ಹಾಗೂ ದುಷ್ಕೃತ್ಯದ ಬಗ್ಗೆ ಮಾತನಾಡುವ ಧೈರ್ಯ ಮಾಡಿದ್ದಾರೆಂದು ಅನುಷ್ಕಾ ಹೇಳಿದ್ದಾರೆ.
ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡುವುದು ಅಥವಾ ತಮಗಾದ ಲೈಂಗಿಕ ಕಿರುಕುಳವನ್ನು ಹೇಳುವುದು ಸುಲಭದ ಕೆಲಸವಲ್ಲ. ಇಂಥಹ ಘಟನೆಗಳು ಬಹಿರಂಗವಾದಾಗ ಮಾತ್ರ ಜನರ ಕೊಳಕು ಮುಖ ಹೊರಗೆ ಬರುತ್ತದೆ ಎಂದು ಅನುಷ್ಕಾ ಹೇಳಿದ್ದಾರೆ.
Be the first to comment