‘ತಮಟೆ’ ಶೋ ರೀಲ್‌ ಬಿಡುಗಡೆ

ಮದನ್ ಪಟೇಲ್ ಮುಖ್ಯಭೂಮಿಕೆಯ ‘ತಮಟೆ’ ಚಿತ್ರದ ಶೋ ರೀಲ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯೂರ್ ಪಟೇಲ್ ಚೊಚ್ಚಲ ನಿರ್ದೇಶನದ  ಚಿತ್ರದ ಶೋ ರೀಲ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

‘ನಾನು ಟೂರಿಂಗ್ ಟಾಕೀಸ್ ನಡೆಸುತ್ತಿದೆ. ಸಿನಿಮಾ ನೋಡಿ ಇಪ್ಪತ್ತೈದು ವರ್ಷಗಳಾಗಿವೆ. ನಮ್ಮದೇ ಚಿತ್ರಮಂದಿರಗಳಿದ್ದರೂ ನಾನು ಸಿನಿಮಾ ನೋಡಿಲ್ಲ. ಎಷ್ಟೋ ದಿನಗಳ ನಂತರ ‘ತಮಟೆ’ ಚಿತ್ರದ ಶೋ ರೀಲ್ ವೀಕ್ಷಿಸಿದೆ. ಸಮಯ ಸಿಕ್ಕಾಗ ಪೂರ್ತಿ ಸಿನಿಮಾ ನೋಡುತ್ತೇನೆ.‌ ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಡಿ.ಕೆ.ಶಿವಕುಮಾರ್‌ ಹಾರೈಸಿದರು.

ಗ್ರಾಮೀಣ ಸೊಗಡಿನ  ತಮಟೆ ವಾದ್ಯಗಾರನೊಬ್ಬನ ಜೀವನದ ಕಥಾಹಂದರ ಹೊಂದಿರುವ  ಚಿತ್ರದಲ್ಲಿ ಮದನ್ ಪಟೇಲ್  ಅಭಿನಯಿಸಿದ್ದಾರೆ.

‘ನಾನು ಕೆಲವು ವರ್ಷಗಳ ಹಿಂದೆ ಈ ಕಾದಂಬರಿ ಬರೆದಿದ್ದೆ. ಅದನ್ನು ಈಗ ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾನೆ. ನಾನೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ.‌ ನಾನು ಈವರೆಗೂ ಮಾಡಿರದ ಪಾತ್ರವಿದು. ಈ ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತ, ನಿರ್ಮಾಣವನ್ನು ಮಾಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ  ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಮದನ್ ಪಟೇಲ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!