ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ: ಚರ್ಚೆ

ಕರ್ನಾಟಕದ ದೇಸಿ ಪ್ರಾಡಕ್ಟ್‌ ಮೈಸೂರು ಸ್ಯಾಂಡಲ್‌  ಸೋಪ್‌ ಗೆ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾರನ್ನು ನೇಮಕ ಮಾಡಲಾಗಿದೆ. ತಮನ್ನಾ  ರಾಯಭಾರಿಯಾಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಕೇಳಿ ಬರುತ್ತಿವೆ.

ರ್ನಾಟಕ ಸರ್ಕಾರದ ಒಡೆತನದ ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್ಸ್‌ ಮಿಲಿಟೆಡ್‌ ಉತ್ಪನ್ನಗಳಿಗೆ ತಮನ್ನಾ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಕವಾಗಿದ್ದಾರೆ. ಮೈಸೂರು ಸ್ಯಾಂಡಲ್​ಸೋಪ್ ತಮನ್ನಾ ಭಾಟಿಯಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದ ಎರಡು ವರ್ಷ 2 ದಿನಗಳ ಕಾಲ  ಇರಲಿದೆ. ಇದಕ್ಕಾಗಿ ತಮನ್ನಾಗೆ ಬರೋಬ್ಬರಿ 6.20 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಸುತ್ತೋಲೆ ವೈರಲ್ ಆಗಿದೆ.

ತಮನ್ನಾ ಮೈಸೂರು ಸ್ಯಾಂಡಲ್‌  ಸೋಪ್‌ ರಾಯಭಾರಿಯಾಗುತ್ತಿದ್ದಂತೆ  ಕನ್ನಡದಲ್ಲಿ ಯಾರು ನಟಿಯರು ಇರಲಿಲ್ವಾ?  ತಮನ್ನಾಗೆ  ಮಣೆ ಹಾಕಿದ್ದು ಯಾಕೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಕನ್ನಡಿಗರು ಹಾಗೂ ಹಲವು ಕನ್ನಡಪರ ಸಂಘಟನೆಗಳು ಹೊರರಾಜ್ಯದ ನಟಿಯನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಇದು ಕನ್ನಡದ ಅಸ್ಮಿತೆಗೆ ವಿರೋಧ ಎಂದು ಅಭಿಪ್ರಾಯ ಪಟ್ಟಿವೆ.

ತಮನ್ನಾ ಬದಲು ಬೇರೆ ನಟಿಯರನ್ನು ರಾಯಭಾರಿಯಾಗಿ ನೇಮಕ ಮಾಡುವಂತೆ ಆಗ್ರಹ ಕೇಳಿ ಬರುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!