ಸುಚೇತನ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾಗಿರುವ ” ತಲಾಕ್ ತಲಾಕ್ ತಲಾಕ್ ” ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ಅನುಭವಿ ನಿರ್ದೇಶಕ ವೈದ್ಯನಾಥನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ತಲಾಕ್ ನಂತರ ನಾಯಕ, ನಾಯಕಿ ಅನುಭವಿಸುವ ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ.
ತಲಾಕ್ ತಲಾಕ್ ತಲಾಕ್ ಚಿತ್ರವು ಉತ್ತರ ಭಾರತದ ಖ್ಯಾತ ಲೇಖಕಿ ನೂರ್ ಜಹೀರ್ ರವರ ಡಿನೈಡ್ ಬೈ ಅಲ್ಲಾಹ್ ಎಂಬ ಸಂಶೋಧನಾ ಕೃತಿಯನ್ನಾಧರಿಸಿದ್ದು, ಕನ್ನಡಕ್ಕೆ ಪ್ರೊ ಎಂ. ಅಬ್ದುಲ್ ರಹಮಾನ್ ಪಾಷ ರವರು ಅಲ್ಲಾಹು ನಿಂದ ನಿರಾಕೃತರು ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ.
ಇದು ಮುಸ್ಲಿಂ ಸಮಾಜದ ಒಂದು ಜ್ವಲಂತ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಚಿತ್ರವಾಗಿದೆ.
ಬಿಡುಗಡೆಗೆ ಮುನ್ನವೇ ಅಪಾರ ಪ್ರಶಂಸೆಗೊಳಗಾಗಿದ್ದು ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ದಿ ಲಿಫ್ಟ್ ಆಫ್ ಸೆಷನ್ಸ್ ಹಾಲಿವುಡ್ 2020
ಹಾಗು ದಿ ಲಿಸ್ಟ್ ಆಫ್ ಯು ಕೆ 2020
ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ವಿಚಾರ.
ಕಾಸ್ಮೋ ಫಿಲಂ ಫೇಸ್ಟಿವಲ್ ಮೇ 2020 ಸಿನಿಮೋತ್ವದಲ್ಲಿ ಬೆಸ್ಟ್ ಇಂಡಿಯನ್ ಫೀಚರ್ ಫಿಲಂ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಕೊಂಡಿದೆ.
ಇದಲ್ಲದೇ ಇತ್ತೀಚೆಗೆ ನಡೆದ ಇಂಡೋ ಗ್ಲೋಬಲ್ ಫಿಲಂ ಫೇಸ್ಟಿವಲ್ನಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ತನ್ನ ಮುಕುಟಕ್ಕೇರಿಸಿಕೊಂಡಿದ್ದು ಎಲ್ಲೆಲ್ಲೂ ಪ್ರಶಂಸೆಗೆ ಪಾತ್ರವಾಗಿದೆ.
ಈ ಬಹು ನಿರೀಕ್ಷಿತ ಚಿತ್ರವನ್ನು ಹಿರಿಯ ನಿರ್ದೇಶಕರಾದ ಎನ್ ವೈದ್ಯನಾಥನ್ ರವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಶೋಕ್ ಕಷ್ಯಪ್ ರವರ ಛಾಯಾಗ್ರಹಣ, ಸುರೇಶ್ ಅರಸು ರವರ ಸಂಕಲನ, ಪ್ರವೀಣ್ ಗೋಡ್ಕಿಂಡಿ ರವರ ಸಂಗೀತವಿದ್ದು, ಮಧುಕರ್ ಬೆಳಕವಾಡಿ ಸಂಭಾಷಣೆ ಬರೆದಿದ್ದಾರೆ. ತಾರಾಗಣದಲ್ಲಿ ಸುನೇತ್ರಾ ನಾಗರಾಜ್ ( ರೇಡಿಯೋ ಜಾಕಿ ನೇತ್ರಾ ) ಸ್ವರೂಪ್ ವೈದ್ಯ, ಶಶಾಂಕ್ ವೈದ್ಯ , ಹಿರಿಯ ಕಲಾವಿದ ಶ್ರೀನಿವಾಸ ಮೂರ್ತಿ, ರವಿಭಟ್, ಇಮ್ತಿಯಾಜ್, ವೀಣಾ ಸುಂದರ್, ಪ್ರವೀಣ್ ಮುಂತಾದವರಿದ್ದಾರೆ.
ಈ ಚಿತ್ರವು ಜನವರಿ ಯಲ್ಲಿ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
Be the first to comment