“ತಾಜ್ ಮಹಲ್ 2” ಟ್ರೈಲರ್ ಶೀಘ್ರ ರಿಲೀಸ್

“ತಾಜ್ ಮಹಲ್ 2” ಚಿತ್ರದ ಟ್ರೇಲರ್ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಗಂಗಾಂಬಿಕೆ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ದೇವರಾಜ್ ಕುಮಾರ್ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮೊದಲಾದ ಕಡೆ 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ದೇವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕ ದೇವರಾಜ್ ಕುಮಾರ್ ಅವರೇ ಬರೆದಿದ್ದಾರೆ.
ಚಿತ್ರಕ್ಕೆ ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದಾರೆ. ವಿಕ್ರಂ ಸೆಲ್ವ ಸಂಗೀತ ನೀಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯ್ ಸಂಕಲನ, ಬಿ.ಧನಂಜಯ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ದೇವರಾಜ್ ಕುಮಾರ್ ಅವರು ಈ ಹಿಂದೆ ‘ಡೇಂಜರ್ ಜೋನ್’, ‘ನಿಶ್ಯಬ್ದ-2’ ಹಾಗೂ ‘ಅನುಷ್ಕಾ’ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!