ನೈಜ ಘಟನೆ ಆಧಾರಿತ ‘ತಾಜ್’ ಚಿತ್ರ ಆಗಸ್ಟ್ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಚಿತ್ರ ನೈಜ ಘಟನೆಯ ಕಥೆ ಆಧರಿಸಿದೆ. ಬಿ.ರಾಜರತ್ನ ಅವರ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನ ಚಿತ್ರಕ್ಕಿದೆ. ಶ್ರೀ ಪಾವನಿ ಲಕ್ಷ್ಮೀ ಕಂಬೈನ್ಸ್ ಬ್ಯಾನರ್ ನ ಷಣ್ಮುಖ್, ಶ್ರೀಮತಿ ಲಕ್ಷ್ಮಿ ಷಣ್ಮುಖ ಹಾಗೂ ಯರಂಗಳ್ಳಿ ಮರಿಯಮ್ಮ ಅವರ ನಿರ್ಮಾಣ ಚಿತ್ರಕ್ಕಿದೆ.
ಇದು ಎರಡು ಧರ್ಮಗಳ ಯುವಕ ಯುವತಿ ನಡೆಯುವ ಪ್ರೇಮ ಕಥೆ. ಮುಖ್ಯ ಪಾತ್ರದಲ್ಲಿರುವ ಷಣ್ಮಖ ಜೈ ಅವರು ಹೊಡೆದಾಟದ ದೃಶ್ಯಗಳಲ್ಲಿ ಎದೆಗಾರಿಕೆ ಪ್ರದರ್ಶನ ಮಾಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ನಾಯಕ ನಟಿ ಅಪ್ಸರಾ ಇಹಲೋಕ ತ್ಯಜಿಸಿದ್ದಾರೆ ಎಂಬುದು ನೋವಿನ ಸಂಗತಿ.
ಚಂದ್ರು ಬಂಡೆ ಅವರ 6 ಸಾಹಸಗಳು, ಜೆಸ್ಸಿಗಿಫ್ಟ್ ಅವರ 4 ಸುಮಧುರ ಹಾಡುಗಳು, ಜೈ ಆರ್ಯ ಅವರ ನೃತ್ಯ, ಹಿತನ್ ಹಾಸನ್ ಅವರ ಹಿನ್ನಲೆ ಸಂಗೀತ, ದೀಪಕ್ ಕುಮಾರ್ ಜೆ. ಕೆ ಅವರ ಕ್ಯಾಮರಾ ಕೈ ಚಳಕ, ಶ್ರೀ ಜವಳಿ ಅವರ ಸಂಕಲನ ಚಿತ್ರಕ್ಕಿದೆ.
ಹಿರಿಯ ಕಲಾವಿದರಾದ ಪದ್ಮಾ ವಸಂತಿ, ಶೋಭರಾಜ್, ಪಟ್ರೆ ನಾಗರಾಜ್, ಬಲರಾಜ್ ವಾಡಿ, ವರ್ಧನ್, ಕಡ್ಡಿ ವಿಶ್ವ, ಕಾಮಿಡಿ ಸೂರಜ್, ಶಿವಣ್ಣ, ಕಾಶೀನಾಥ್, ಮೈಸೂರ್ ಜಗದೀಶ್ ಮುಂತಾದವರ ತಾರಾಬಳಗವಿದೆ.
—–

Be the first to comment