‘ತಾಜ್’ ಅಚ್ಚ “ಕರ್ನಾಟಕದ ಸ್ಟೋರಿ”

‘ತಾಜ್ ‘,  “ಕಾಶ್ಮೀರಿ ಫೈಲ್ಸ್”,  “ಕೇರಳ ಸ್ಟೋರಿ “ಅಲ್ಲ.  ಅಚ್ಚ ಕರ್ನಾಟಕದ ಸ್ಟೋರಿ ಎಂದು  ನಿರ್ದೇಶಕ ಬಿ.ರಾಜರತ್ನ ಹೇಳಿದ್ದಾರೆ.

ಬಿ.ರಾಜರತ್ನ “ಅವರು ಕಥೆ- ಚಿತ್ರಕತೆ- ಸಂಭಾಷಣೆ- ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು, ‘ತಾಜ್ ‘ ಚಿತ್ರವು  ಸೆನ್ಸಾರ್ ಆಗಿದೆ.  ಚಿತ್ರ U/A ಸರ್ಟಿಫಿಕೇಟ್ ಪಡೆದಿದ್ದು, ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಸೆನ್ಸಾರ್ ಅಧಿಕಾರಿಗಳು” ಚಿತ್ರ ವೀಕ್ಷಿಸಿ  ಈ ಚಿತ್ರದ ಕೆಲವು ಪದಗಳು ವಿವಾದಾತ್ಮಕ ಇದ್ದು, ಇವುಗಳಿಗೆ ಕತ್ತರಿ ಪ್ರಯೋಗ ಮಾಡಬೇಕಾಗುತ್ತದೆ ಎಂದರು. ಆದರೆ ನಿರ್ದೇಶಕರು ನೈಜ ಘಟನೆ ಆಧರಿಸಿ ಇದನ್ನು ತಯಾರಿಸಲಾಗಿದೆ. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗದಂತೆ ಚಿತ್ರ ತಯಾರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಚಿತ್ರಕ್ಕೆ ಛಾಯಾಗ್ರಹಣ ದೀಪಕ್ ಕುಮಾರ್ ಜೆ.ಕೆ, ಸಂಗೀತ ಜೆಸ್ಸಿಗಿಫ್ಟ್ , ಸಂಕಲನ ಶ್ರೀ- ಜವಳಿ, ಸಾಹಸ  ಚಂದ್ರು ಬಂಡೆ, ನೃತ್ಯ ಜೈ ಆರ್ಯ, ಹಿನ್ನಲೆ ಸಂಗೀತ ಹಿತನ್ ಹಾಸನ ಅವರದ್ದು. ತಾರಾಗಣದಲ್ಲಿ  ಷಣ್ಮುಖ ಜೈ, ಅಪ್ಸರಾ, ವರ್ಧನ್, ಬಾಲರಾಜ್ ವಾಡಿ, ಶೋಭರಾಜ್, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಸೂರಜ್,ಸ್ಟಿಲ್ ನಾಗರಾಜ್, ಜಗದೀಶ್ ಮೈಸೂರ್, ಶಿವಣ್ಣ, ಕಾಶೀನಾಥ್, ಸರೋಜಮ್ಮ ಮುಂತಾದವರು ಇದ್ದಾರೆ.

“ತಾಜ್” ಚಿತ್ರದ ಟೀಸರ್  ಹಾಗೂ ಟ್ರೈಲರ್, ಹಾಡುಗಳು  ಬಿಡುಗಡೆ ಆಗಿದ್ದು, ಉತ್ತಮವಾದ ಪ್ರತಿಕ್ರಿಯೆ ಬರುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!