ನೈಜ ಘಟನೆ ಆಧಾರಿತ ‘ತಾಜ್’ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ತಾಜ್’ ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ನೈಜ ಘಟನೆಯ ಕಥೆ ಆಧರಿಸಿರೋ ಈ ಚಿತ್ರಕ್ಕೆ ನಿರ್ದೇಶಕ ‘ಬಿ.ರಾಜರತ್ನ’ ಅವರ ಕಥೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ‘ಶ್ರೀ ಪಾವನಿ ಲಕ್ಷ್ಮೀ ಕಂಬೈನ್ಸ್ ‘ ಬ್ಯಾನರ್ ನ ‘ಷಣ್ಮುಖ್’, ‘ಶ್ರೀಮತಿ ಲಕ್ಷ್ಮಿ ಷಣ್ಮುಖ’ ಹಾಗೂ ‘ಯರಂಗಳ್ಳಿ ಮರಿಯಮ್ಮ’ ಅವರ ನಿರ್ಮಾಣದ ನೈಜ ಘಟನೆ ಆಧಾರಿತ ‘ತಾಜ್’ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ ಆಗಿದ್ದು ಚಿತ್ರರಸಿಕರ ಮನ ಸೆಳೆದಿದೆ.

ನಿರ್ದೇಶಕ ಬಿ.ರಾಜರತ್ನ
ಚಿತ್ರವು ಪಕ್ಕ ಕಮರ್ಷಿಯಲ್ ಆಗಿ.ನೈಜವಾಗಿ,ಮೂಡಿ ಬಂದಿದ್ದು. ಉತ್ತಮ ಸಂದೇಶದ ಜೊತೆಗೆ ಮನರಂಜನೆಯ ಬಾಡೂಟ ನೀಡಲಿದ್ದು ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಲಿದೆ,
“ಚಂದ್ರು ಬಂಡೆ” ಅವರ 6 ಸಾಹಸ ಗಳು, ಜೆಸ್ಸಿಗಿಫ್ಟ್ ಅವರ 4 ಸುಮಧುರ ಹಾಡುಗಳು ಹಾಗೂ ಜೈ ಆರ್ಯ ಅವರ ನೃತ್ಯ, ಹಿತನ್ ಹಾಸನ್ ಅವರ ಹಿತವಾದ ಹಿನ್ನಲೆ ಸಂಗೀತ, “ದೀಪಕ್ ಕುಮಾರ್ ಜೆ. ಕೆ” ಅವರ ಕ್ಯಾಮರಾ ಕೈ ಚಳಕ, “ಶ್ರೀ ಜವಳಿ” ಅವರ ಸಂಕಲನ, “ತಾಜ್” ಚಿತ್ರಕ್ಕಿದೆ.
ಹೊಸ ಪ್ರತಿಭೆಗಳಾದ “ಷಣ್ಮುಖ ಜೈ ” ಹಾಗೂ “ಅಪ್ಸರಾ” ಮುಖ್ಯ ಭೂಮಿಕೆಯಲ್ಲಿ ಹಿರಿಯ ಕಲಾವಿದರಾದ “ಪದ್ಮಾ ವಸಂತಿ”, “ಶೋಭರಾಜ್”, “ಪಟ್ರೆ ನಾಗರಾಜ್”, “ಬಲರಾಜ್ ವಾಡಿ”, “ವರ್ಧನ್”, “ಕಡ್ಡಿ ವಿಶ್ವ”, “ಕಾಮಿಡಿ ಸೂರಜ್”, “ಶಿವಣ್ಣ”, “ಕಾಶೀನಾಥ್”, “ಮೈಸೂರ್ ಜಗದೀಶ್”, ಇನ್ನು ಮುಂತಾದವರ ತಾರಬಳಗವಿದೆ, ಚಿತ್ರವು ಸೆನ್ಸರ್ ಆಗಿದ್ದು,ಅತೀ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ…

ನಟ ಮತ್ತು ನಿರ್ಮಾಪಕ ಷಣ್ಮುಖ ಜೈ

Be the first to comment