ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್, ಡಾಲಿ ಧನಂಜಯ್ ನಿರ್ಮಾಣದ ‘ಟಗರು ಪಲ್ಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
‘ಡಾಲಿ ಪಿಕ್ಚರ್’ನಲ್ಲಿ ಮೂಡಿ ಬರುವ ‘ಟಗರು ಪಲ್ಯ’ ಚಿತ್ರಕ್ಕೆ ನಾಗಭೂಷಣ್ ನಾಯಕನಾಗಿದ್ದಾರೆ. ಅಮೃತಾ ಪ್ರೇಮ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.
ಈ ಮೂಲಕ ಪ್ರೇಮ್ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ. ‘ಗುರು ಶಿಷ್ಯರು’ ಚಿತ್ರದಲ್ಲಿ ಶರಣ್ ಶಿಷ್ಯನಾಗಿ ಪ್ರೇಮ್ ಪುತ್ರ ಏಕಾಂತ್ ನಟಿಸಿದ್ದರು.
ನೆನಪಿರಲಿ ಪ್ರೇಮ್ ಪುತ್ರಿ ಶಾಲಾ-ಕಾಲೇಜು ದಿನಗಳಿಂದ ಓದಿನಿಂದ ಹಿಡಿದು ಎಲ್ಲಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ.
ಟಗರು ಪಲ್ಯ’ ವನ್ನು ಡಾಲಿ ಆಪ್ತ ಗೆಳೆಯರೇ ಸೇರಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
__
Be the first to comment