ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಡ ಎಂದು ಪ್ರತಿಭಟನೆ, ಹೋರಾಟ ಮಾಡುವ ಒಂದು ವರ್ಗ. ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬರಲಿ ಎಂದು ಹೋರಾಟ, ಪ್ರತಿಭಟನೆ ಮಾಡುವ ಇನ್ನೊಂದು ವರ್ಗ. ಹೀಗೆ, ಪರ-ವಿರೋಧದ ನಡುವೆಯೇ ಹಲವು ಡಬ್ಬಿಂಗ್ ಸಿನಿಮಾಗಳು ಬಂದಿದೆ, ಬರ್ತಿದೆ. ಈಗ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸರದಿ. ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ಕನ್ನಡದಲ್ಲಿ ಬರುತ್ತೋ ಇಲ್ವೋ ಎಂಬ ಗೊಂದಲ ಇತ್ತು.
ಆದ್ರೀಗ, ಸೈರಾ ಕನ್ನಡದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ. ಕನ್ನಡದಲ್ಲೂ ಡಬ್ ಆಗಿ ತೆರೆಕಾಣಲಿದೆ. ಈಗಾಗಲೇ ಕನ್ನಡದ ಟಿವಿ ಹಕ್ಕು ಕೂಡ ಖ್ಯಾತ ವಾಹಿನಿಯೊಂದು ಖರೀದಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಇದೇ ತಿಂಗಳು 20 ರಂದು ಸೈರಾ ಟ್ರೈಲರ್ ಬಿಡುಗಡೆಯಾಗ್ತಿದ್ದು, ಆ ದಿನ ಈ ಎಲ್ಲ ಗೊಂದಲಗಳಿಗೂ ಸ್ಪಷ್ಟ ಉತ್ತರ ಸಿಗಲಿದೆ. ಇನ್ನುಳಿದಂತೆ ರಾಮ್ ಚರಣ್ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ತಮನ್ನಾ, ನಯನತಾರ, ಜಗಪತಿ ಬಾಬು ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಈ ಚಿತ್ರದಲ್ಲಿದೆ. ಕೊನೆಯದಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ‘ಡಿಯರ್ ಕಾಮ್ರೇಡ್’ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ತೆರೆಕಂಡಿತ್ತು. ಏಕಕಾಲದಲ್ಲಿ ನಾಲ್ಕು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.
32 ಕೋಟಿಗೆ ಕರ್ನಾಟಕ ವಿತರಣೆ ಹಕ್ಕು ಟಾಲಿವುಡ್ ನ ಮೆಘಾಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೋಟಿ ಕೋಟಿಗೆ ಬಿಕರಿಯಾಗಿದೆ. ಬರೋಬ್ಬರಿ 32ಕೋಟಿಗೆ ‘ಸೈರಾ’ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ತೆಲುಗು ಚಿತ್ರವೊಂದು ಈ ಮೊತ್ತಕ್ಕೆ ಬಿಕರಿಯಾಗಿರುವುದು ಇದೆ ಮೊದಲು.
Be the first to comment