‘ಅಗ್ನಿಸಾಕ್ಷಿ’ ಧಾರಾವಾಹಿಯ ನಟ ವಿಜಯ್‌ಸೂರ್ಯ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಅಗ್ನಿಪರೀಕ್ಷೆಗಿಳಿದಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಸ್ವಿಚ್ ಕೇಸ್’ ಚಿತ್ರ ಮೇ.17ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೊಂಡಾಣ ಫಿಲ್ಮ್ಸ್ ನಿರ್ಮಾಣದ ‘ಸ್ವಿಚ್ ಕೇಸ್’ ಚಿತ್ರವನ್ನು ಚೇತನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ನಿರ್ದೇಶಕ ಚೇತನ್ :
ನಿರ್ದೇಶಕ ಚೇತನ್ ರ ಪ್ರಕಾರ, ಶೀರ್ಷಿಕೆಯ ಮೊದಲಾರ್ಧ, ಸ್ವಿಚ್, ಸಾಫ್ಟ್‌ವೇರ್ ಎಂಜಿನಿಯರ್‌ಗಳು ವಿಭಿನ್ನ ಉದ್ಯೋಗಗಳನ್ನು ಹುಡುಕುತ್ತಿರುವ, ಒಂದು ಕಂಪನಿಯಿಂದ ಇನ್ನೊಂದಕ್ಕೆ ಪರಿವರ್ತನೆಯನ್ನು ಸೂಚಿಸುತ್ತದೆ. ‘Switch { case n:’ ಪ್ರೋಗ್ರಾಮಿಂಗ್ ಭಾಷೆಗಳನ್ನು ಸೂಚಿಸುತ್ತದೆ, ಇದು ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಪರಿಚಿತವಾಗಿರುವ ಪರಿಕಲ್ಪನೆಯಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ‘Switch { case n:’ ಐಟಿ ಉದ್ಯಮದೊಳಗಿನ ಸ್ನೇಹ, ರಾಜಕೀಯ ಮತ್ತು ಸಂಬಂಧಗಳ ವಿಷಯಗಳನ್ನು ಪರಿಶೋಧಿಸುತ್ತದೆ, ಸರಾಸರಿ ಐಟಿ ಉದ್ಯೋಗಿಯ ದೈನಂದಿನ ಜೀವನವನ್ನು ಬಿಚ್ಚಿಡುತ್ತದೆ. ಚಲನಚಿತ್ರದ ನಿರ್ಣಾಯಕ ಅಂಶವೆಂದರೆ ಕಂಪನಿಗಳ ನಡುವಿನ ಪರಿವರ್ತನೆಯ ಕಠೋರ ಸತ್ಯಗಳನ್ನು ಚಿತ್ರಿಸುವ ಸಾಮರ್ಥ್ಯದಲ್ಲಿದೆ, ಅಲ್ಲಿ ಸಂಬಂಧಗಳ ಅಂಶ ಮತ್ತು ವೃತ್ತಿಪರ ಆಕಾಂಕ್ಷೆಗಳು ಗಮನಾರ್ಹ ರೂಪಾಂತರಗಳಿಗೆ ಒಳಗಾಗುತ್ತವೆ.
ಶ್ವೇತಾ ವಿಜಯ್‌ಕುಮಾರ್ ಚಿತ್ರದ ನಾಯಕಿ. ಉಳಿದಂತೆ ಬಲರಾಜವಾಡಿ, ಸಂತೋಷ್ ಕಾರ್ಕಿ, ಪೃಥ್ವಿರಾಜ್ ಮುಂತಾದವರು ನಟಿಸಿದ್ದಾರೆ. ಭೃತ್ತ್ವ ಶ್ಯಾಲೆಬ್ ಸಂಗೀತವಿದ್ದು, ಒಂದು ಹಾಡಿಗೆ ಚಂದನ್‌ಶೆಟ್ಟಿ-ದೀಪಕ್ ದೊಡ್ಡೇರ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಪ್ರಶಾಂತ್ ಗಿರಿಯಪ್ಪ ಅವರದ್ದು.
Producer – Baby S Shetty
Director – Chethan Shetty
Post Views:
198
Be the first to comment