ಸಿದ್ದು ಮೂಲಿಮನಿ ಅಭಿನಯದ ‘ಸೀಟ್ ಎಡ್ಜ್’ ಚಿತ್ರ ಜನವರಿ 30 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಚೇತನ್ ಶೆಟ್ಟಿ ಚೊಚ್ಚಲ ನಿರ್ದೇಶನದ ಈ ಚಿತ್ರ ಘೋಸ್ಟ್ ಹಂಟಿಂಗ್‌ಗೆ ಹೋಗುವ ವ್ಲಾಗರ್ ಒಬ್ಬನ ಕಥೆಯನ್ನು ಹೇಳುತ್ತದೆ. ಲವ್ ಯು ಮುದ್ದು ನಂತರ ಸಿದ್ದು ಮೂಲಿಮನಿ ಸೀಟ್ ಎಡ್ಜ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಯೂಟ್ಯೂಬ್ ವ್ಲಾಗರ್ ಆಗಿ ನಟಿಸಿದ್ದಾರೆ. ರವೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
‘ಸೀಟ್ ಎಡ್ಜ್’ ಚಿತ್ರ ಕಾಮಿಡಿ, ಹಾರರ್ ಮತ್ತು ಸಸ್ಪೆನ್ಸ್ ಮಿಶ್ರಣವಾಗಿದೆ. ಎನ್ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಗಿರಿಧರ ಟಿ ವಸಂತಪುರ ನಿರ್ಮಿಸಿದ್ದಾರೆ. ಸುಜಾತಾ ಗಿರಿಧರ ಸಹ-ನಿರ್ಮಾಪಕರಾಗಿದ್ದಾರೆ. ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಪೋಷಕ ಪಾತ್ರವರ್ಗವಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ, ಕುದುರೆಮುಖದಲ್ಲಿ 45 ದಿನಗಳ ಕಾಲ ಚಿತ್ರೀಕರಣಗೊಂಡ ಚಿತ್ರಕ್ಕೆ ದೀಪಕ್ ಕುಮಾರ್ ಜೆಕೆ ಛಾಯಾಗ್ರಾಹಕ, ನಾಗೇಂದ್ರ ಕೆ ಉಜ್ಜನಿ ಅವರ ಸಂಕಲನ, ಆಕಾಶ್ ಪರ್ವ ಅವರ ಸಂಗೀತ ಸಂಯೋಜನೆ, ರಘು ಆರ್‌ಜೆ ನೃತ್ಯ ಸಂಯೋಜನೆ ಇದೆ.
ಚಿತ್ರತಂಡ ಇಲ್ಲಿಯವರೆಗೆ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಅರ್ಮಾನ್ ಮಲಿಕ್ ಹಾಡಿರುವ ‘ಸಾರಿ ಹೇಳುವೆ ಜಗಕ್ಕೆ’, ಟಿಪ್ಪು ಹಾಡಿರುವ ಹಂಗೋ ಹಿಂಗೋ ಹಾಡು ಬಿಡುಗಡೆಯಾಗಿದೆ. ವ್ಲಾಗ್-1: ದಿ ಲೂಪ್ ಎಂಬ ಶೀರ್ಷಿಕೆಯ ಟೀಸರ್ ರಿಲೀಸ್ ಮಾಡಲಾಗಿದೆ.
ನಾಗಾರ್ಜುನ್ ಶರ್ಮಾ ಬರೆದ ಮತ್ತು ಸಿದ್ಧಾರ್ಥ ಬೆಳ್ಮಣ್ಣು ಹಾಡಿರುವ ‘ಲೈಫು ಯಾಕೋ ಖಾಲಿ ಖಾಲಿ’ ಎಂಬ ಹಾಡು ಜನವರಿ 29 ರಂದು ಬಿಡುಗಡೆಯಾಗಲಿದೆ.
—-





Be the first to comment