ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್ ಅಡಿ ಸ್ಟಾರ್ ಮಸ್ತಾನ್ ಹಾಗೂ ಕೆ.ಆರ್. ಮುರಹರಿ ರೆಡ್ಡಿ ಅವರ ನಿರ್ಮಾಣದ ‘ಸ್ವೇಚ್ಛಾ’ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಎರಡು ಹಾಡುಗಳ ಪ್ರದರ್ಶನ ಇತ್ತೀಚೆಗೆ ನೆರವೇರಿತು.
ನಿರ್ದೇಶಕ ಸುರೇಶ್ ರಾಜು ಮಾತನಾಡಿ ಪ್ರತಿಯೊಬ್ಬರೂ ಅವರವರ ಸ್ವೇಚ್ಚೆಗಾಗಿ ಹೇಗೆಲ್ಲ ಹೋರಾಡುತ್ತಾರೆ ಅನ್ನೋದನ್ನು ಈ ಕಥೆಯಲ್ಲಿ ಹೇಳಿದ್ದೇವೆ. ಅನ್ವಿಶ್ ಹಾಗೂ ಪವಿತ್ರಾ ನಾಯಕ್ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜನವರಿ ಅಂತ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು.
ನಾಯಕ ಅನ್ವಿಶ್ ಮಾತನಾಡಿ, ಜಲ್ಲಿಕಟ್ಟು, ಯತಾರ್ಥ ನಂತರ ಇದು ನನ್ನ ಮೂರನೇ ಚಿತ್ರ, ನಾನಿಲ್ಲಿ ಕೂಲಿ ಕೆಲಸ ಮಾಡೋ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ದೊಡ್ಡ ಮನೆತನದ ಹುಡುಗಿಯನ್ನು ನಾನು ಇಷ್ಟಪಟ್ಟಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ ಎಂದರು.
ಚಿತ್ರದ 5 ಹಾಡುಗಳಿಗೆ ಲೋಕಿ ತವಸ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಅನುರಾಮ್ ಹಾಗೂ ಚೇತನ್ ನಾಯಕ್ ದನಿಯಾಗಿದ್ದಾರೆ, ಕರ್ನಾಟಕದ ಗಡಿಯ ರಾಯಚೂರು, ಬೂರ್ದಿಪಾಡು, ಶ್ರೀರಂಗಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಸುರೇಶ್ ರೆಡ್ಡಿ ಅವರು ರಚಿಸಿದ ಕಥೆಗೆ ಸುರೇಶ್‌ರಾಜು ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ, ಸ್ಟಾರ್ ಮಸ್ತಾನ್ ಮತ್ತು ಕೆ.ಆರ್. ಮುರಹರಿ ರೆಡ್ಡಿ ಅವರ ನಿರ್ಮಾಣದ ಈ ಚಿತ್ರಕ್ಕೆ ಎಸ್. ಸತೀಶ್ ಅವರ ಛಾಯಾಗ್ರಹಣವಿದೆ, ಈಗಾಗಲೇ ಸ್ವೇಚ್ಛಾ ಚಿತ್ರದ ಎರಡು ಹಾಡುಗಳು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ.
Be the first to comment