ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಾಯಕ ಹಾಗೂ ನಾಯಕಿ ಜತೆಗಿರುವ ಫಸ್ಟ್ ಲುಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಈ ಪೋಸ್ಟರ್ ನ್ನು ಚಿತ್ರದ ನಿರ್ಮಾಪಕಿ ರಮ್ಯಾ ಹಾಗೂ ಚಿತ್ರತಂಡದ ಇತರೆ ಸದಸ್ಯರು ಹಂಚಿಕೊಂಡಿದ್ದಾರೆ. ಪೋಸ್ಟರ್‌ಗಳು ಹಾಗೂ ಟೈಟಲ್ ಚಿತ್ರ ಲವ್ ಸ್ಟೋರಿ ಎಂಬುದನ್ನು ಹೇಳುತ್ತಿದ್ದು, ರಾಜ್ ಬಿ ಶೆಟ್ಟಿ ನಿರ್ದೇಶನದ ಬಗ್ಗೆ ಕುತೂಹಲ ಉಂಟಾಗಿದೆ.
ವೇಗವಾಗಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಬೇಕಿದೆ. ನಾಯಕ ನಟಿ ರವಿ ಸಿರಿಕುಮಾರ್ ಚಿತ್ರದಲ್ಲಿ ಪ್ರೇರಣ ಎಂಬ ಪಾತ್ರ ನಿರ್ವಹಿಸಲಿದ್ದು, ನಟ ರಾಜ್ ಬಿ ಶೆಟ್ಟಿ ಅನಿಕೇತ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.
ಗರುಡ ಗಮನ ವೃಷಭ ವಾಹನ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ರಾಜ್ ಬಿ ಶೆಟ್ಟಿ ಈ ಬಿಗ್ ಹಿಟ್ ಬಳಿಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ದೇಶಿಸುವ ಜೊತೆಗೆ ತಾವೇ ನಾಯಕನಾಗಿ ಕಾಣಸಿಕೊಳ್ಳುವುದಾಗಿ ಘೋಷಿಸಿದ್ದರು.
ಆಪಲ್ ಬಾಕ್ಸ್ ಸ್ಟುಡಿಯೊಸ್ ಎಂಬ ತಮ್ಮದೇ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದ ನಟಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಣ್ಣ ಹಚ್ಚುವುದಾಗಿ ಸುದ್ದಿ ಆಗಿತ್ತು. ಬಳಿಕ ರಮ್ಯಾ ನಿರ್ವಹಿಸಬೇಕಿದ್ದ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು.
____

Be the first to comment