‘ಸ್ವಾರ್ಥರತ್ನ’ದಲ್ಲಿ ಚಿತ್ರದಲ್ಲಿ ಅಣ್ಣಾವ್ರ ಚಿತ್ರದ ಗೀತೆ

ಡಾ.ರಾಜ್‍ಕುಮಾರ್ ನಟನೆಯ ಅನೇಕ ಗೀತೆಗಳು ಈಗಾಗಲೇ ಈಗಿನ ಚಿತ್ರಗಳಲ್ಲೂ ಬಂದು ಹೋಗಿದೆ. ಈಗ ಅಣ್ಣಾವ್ರು ನಟಿಸಿರುವ ಕಸ್ತೂರಿನಿವಾಸ ಚಿತ್ರದ ನೀ ಬಂದು ನಿಂತಾಗ ಗೀತೆಯನ್ನು ಸ್ವಾರ್ಥರತ್ನ ಚಿತ್ರಕ್ಕಾಗಿ ನಿರ್ದೇಶಕ ಅಶ್ವಿನ್ ಬಳಸಿಕೊಂಡಿದ್ದಾರೆ.ಈ ಗೀತೆಯು ರೆಟ್ರೋ ಮಾದರಿಯಲ್ಲೇ ಬಂದಿರುವುದು ಗೀತೆಯನ್ನು ಈ ಹಿಂದೆ ಚಿತ್ರೀಕರಿಸಿದ್ದ ಕೆಆರ್‍ಎಸ್‍ನಲ್ಲೇ ಚಿತ್ರೀಕರಿಸಿರುವುದು ಕೂಡ ಒಂದು ವಿಶೇಷ .ಹಿರಿಯ ನಿರ್ದೇಶಕ ಭಗವಾನ್‍ರ ಸಲಹೆಯಂತೆ ಈ ಗೀತೆಯನ್ನು ರೆಟ್ರೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರಂತೆ. ಹಿರಿಯ ನಿರ್ದೇಶಕ ಭಗವಾನ್ ಅವರು ಮಾತನಾಡಿ, ಕಸ್ತೂರಿ ನಿವಾಸದಲ್ಲಿ ನೀ ಬಂದು ನಿಂತಾಗ ಹಾಡಿನಲ್ಲಿ ಡಾ.ರಾಜ್ ಹಾಗೂ ಆರತಿ ಅವರು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಬೆಳಗ್ಗೆ 7ಕ್ಕೆ ಹಾಡಿನ ಚಿತ್ರೀಕರಣ ಶುರು ಮಾಡಿ ಸಂಜೆ ವೇಳೆಗೆ ಮುಗಿಸಿದ್ದೆವು. ಇಂದು ಕೂಡ ಆ ಗೀತೆಯನ್ನು ಕೇಳಿದರೆ ನನ್ನ ವಯಸ್ಸು 86 ರಿಂದ 18ಕ್ಕೆ ಇಳಿಯುತ್ತದೆ. ಈ ಚಿತ್ರದ ನಾಯಕ, ನಿರ್ದೇಶಕ ಇಬ್ಬರೂ ನನ್ನ ಶಿಷ್ಯರು ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

 

ನಿರ್ದೇಶಕ ಅಶ್ವಿನ್ ಕೊಡಂಗೆ ಮಾತನಾಡಿ, ನೀ ಬಂದು ನಿಂತಾಗ ಗೀತೆಯನ್ನು ಕೇವಲ ಒಂದೇ ದಿನದಲ್ಲಿ ಚಿತ್ರೀಕರಿಸಲು ಆಗುವುದಿಲ್ಲ ಎಂದುಕೊಂಡು ಒತ್ತಡದಲ್ಲಿ ಕೊರಿಯೋಗ್ರಾ ಮಾಡಿದೆವು, ಅಲ್ಲದೆ ಕೆಆರ್‍ಎಸ್‍ನಲ್ಲಿ ಈ ಗೀತೆಯನ್ನು ಚಿತ್ರಿಸಲು ನಮಗೆ ಒಂದು ದಿನದ ಮಟ್ಟಿಗೆ ಅನುಮತಿ ದೊರೆತಿತ್ತುಘಿ. ಭಗವಾನ್ ಅವರು ಆಗ ಆ ಗೀತೆಯನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದು ಕೇಳಿದರೆ ಆಶ್ಚರ್ಯವಾಗುತ್ತದೆ. ಈ ಚಿತ್ರದಲ್ಲಿ ನಟ ಯಶ್ ಹಾಗೂ ರಾಧಿಕಾಪಂಡಿತ್‍ರ ಅಪ್ಪಣೆ ಪಡೆದುಕೊಂಡು ಅವರಿಗಾಗಿಯೇ ಒಂದು ಪ್ರೇಮಗೀತೆಯನ್ನು ರಚಿಸಲಾಗಿದ್ದು, ಮತ್ತೊಂದು ಗೀತೆಯಲ್ಲಿ ಹಾಸ್ಯ ನಟ ಸಾಧುಕೋಕಿಲಾ ಅವರು ಕುಡಿತದಿಂದ ಜೀವನ ಹಾಳು ಮಾಡಿಕೊಳ್ಳಬೇಡಿರೆಂಬ ಗೀತೆಯಲ್ಲಿ ಸ್ಟೆಪ್ಸ್ ಹಾಕಲಿದ್ದಾರೆ , ಸೆಲಬ್ರಿಟಿಗಳನ್ನು ಮಾಡುವುದು ಅಭಿಮಾನಿಗಳು. ಇಂದು ಅದೇ ಅಭಿಮಾನಿಗಳನ್ನು ಸೆಲಬ್ರಟಿಗಳನ್ನಾಗಿ ಮಾಡಿ ಅವರಿಂದ ಹಾಡನ್ನು ಬಿಡುಗಡೆ ಮಾಡಿಸಲಾಗಿದೆ ಎಂದರು.ಒಂದು ಕಾಲದಲ್ಲಿ ಅವಕಾಶ ಮಾಡಿಕೊಟ್ಟ ಮೋಹನ್ ಕೃಷ್ಣ ಅವರಿಂದ ರೆಟ್ರೋ ಗೀತೆಯನ್ನು ಹಾಡಿಸಲಾಗಿದೆ. ಐದು ಹಾಡುಗಳ ಪೈಕಿ ಒಂದನ್ನು ಜಯಂತ್ ಕಾಯ್ಕಿಣಿ, ಉಳಿದವಕ್ಕೆ ನಿರ್ದೇಶಕರು ಸಾಹಿತ್ಯ ರಚಿಸಿದ್ದಾರೆ ಎಂದು ಸಂಗೀತ ನಿರ್ದೇಶಕ ಬಿ.ಜೆ. ಭರತ್ ಹೇಳಿದರು. ನಾಯಕಿ ಆಶಿತಾ ಮಾತನಾಡಿ, ಇದೊಂದು ಪ್ರಯೋಗಾತ್ಮಕ ಗೀತೆಯಾಗಿದ್ದು, ಮೂಲ ಗೀತೆಯನ್ನು ಅನುಸರಿಸದೆ ಸ್ಟೆಪ್ಸ್ ಹಾಕಿದ್ದು ತುಂಬಾ ಸಂತಸ ತಂದಿದೆ ಎಂದರು.ಮತ್ತೊಬ್ಬ ನಾಯಕಿ ಸ್ನೇಹಾ ಸಿಂಗ್ ತನ್ನ ಪಾತ್ರದ ಬಗ್ಗೆ ಮಾತನಾಡಿದರು. ಆಗಿನ ಕಾಲದಂತೆ ಕಾಸ್ಟ್ಯೂಮ್ ಧರಿಸಿದ್ದ ನಾಯಕ ಆದರ್ಶ್ ಗುಣರಾಜ ಮಾತನಾಡಿ ಇವತ್ತಿನ ಕಾಲಮಾನಕ್ಕೆ ತಕ್ಕಂತೆ ಚಿತ್ರದ ಕತೆಯನ್ನು ಹೆಣೆಯಲಾಗಿದೆ. ಈ ಸಿನಿಮಾದಲ್ಲಿ ನವರಸ ಅಲ್ಲದೆ ಹೊಸ ಸ್ವಾರ್ಥರಸವೂ ಇದೆ ಎಂದು ತನ್ನ ಪಾತ್ರದ ಪರಿಚಯ ಮಾಡಿಕೊಂಡರು. ಎಲ್ಲಾ ಅಂದುಕೊಂಡಂತೆ ಆದರೆ ನವೆಂಬರ್‍ನಲ್ಲಿ ಈ ಚಿತ್ರ ತೆರೆಗೆ ಬರುವ ಸಾದ್ಯತೆ ಇದೆ.
ಸ್ವಾರ್ಥರತ್ನ ಚಿತ್ರದ ಪ್ರತಿಯೊಂದು ಗೀತೆಯು ಡಿಫರೆಂಟ್ ಆಗಿದ್ದು ಚಿತ್ರವು ಕೂಡ ಅಷ್ಟೇ ವಿಶಿಷ್ಟವಾಗಿದೆ ಎಂದು ಹೇಳಿರುವ ಯುವ ತಂಡದ ಭರವಸೆ ಸುಳ್ಳಾಗದಿರಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!