ಸ್ವಚ್ಛ ಭಾರತ ಕೇಳಿದ್ದೀರಿ. ಯಾಕೆ ಸ್ವಚ್ಛ ಕರ್ನಾಟಕ ಆಗಬಾರದು ಎಂದು ಶ್ರೀ ಶಾಂತಿ ಶ್ರೀ ಪೆಡಕ್ಷನ್ ಸಂಸ್ಥೆ ತೀರ್ಮಾನಿಸಿದೆ. ಕಳೆದ ಆಗಸ್ಟ್ 2 ರಾಡು ?ಸ್ವಚ್ಛ ಕರ್ನಾಟಕ? ಸಿನಿಮಾ ಮುಹೂರ್ತ ಹಿರಿಯ ಸ್ವಾತಂತ್ರ್ಯ ಹೊರತಾಗಾರರಾದ ಡಾಕ್ಟರ್ ಎಚ್ ಎಸ್ ದೊರೆಸ್ವಾಮಿ, ಡಾ ದೊಡ್ಡರಂಗೆ ಗೌಡ, ಶ್ರೀ ಪಿ ಜಿ ಆರ್ ಸಿಂಧ್ಯಾ. ಉಮೇಶ್ ಬಣಕರ್, ಸ್ವಸ್ತಿಕ್ ಶಂಕರ್ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಪ್ರಾರಂಭವಾಗಿದೆ.ನಿರ್ಮಾಪಕ ಹಾಗೂ ನಿರ್ದೇಶಕ ಎಲ್ ರವಿ ಕುಮಾರ್ ಅವರು ಚಿತ್ರವನ್ನ ಬೆಂಗಳೂರು ಸುತ್ತ ಮುತ್ತಲು ಚಿತ್ರೀಕರಿಸಲು ಆಯೋಜಿಸಿದ್ದಾರೆ. ರಾಜ್ ಭಾಸ್ಕರ್ ಅವರ ಸಂಗೀತಕ್ಕೆ ದೊಡ್ಡರಂಗೆ ಗೌಡ ಅವರ ಸಾಹಿತ್ಯ ಒದಗಿಸಿದ್ದಾರೆ. ಬುಲ್ಲೆಟ್ ವಿನೋದ್, ಅಂಜಲಿ ಮುಖ್ಯ ಪಾತ್ರದರಿಗಳು, ವಿಷ್ಣು, ಗೌರವ ಪಾತ್ರದಲ್ಲಿ ಓಂ ಪ್ರಕಾಷ್ ರಾವು, ಸ್ವಸ್ತಿಕ್ ಶಂಕರ್, ಹಾಸ್ಯ ಕಲಾವಿದ ಸನ್ನಿ ಹಾಗೂ ಇತರರು ಇದ್ದಾರೆ. ದೊಡ್ಡರಂಗೆ ಗೌಡ ಹಾಗೂ ಎಚ್ ಎಸ್ ದೊರೆಸ್ವಾಮಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿದೇಶದಿಂದ ಹಿಂತಿರುಗಿದ ಯುವಕ ಕರ್ನಾಟಕವನ್ನು ಸ್ವಚ್ಛವಾಗಿ ಇಡಲು ಸಿಂಗಪೂರ್ ಮಾದರಿಯಲ್ಲಿ ರೂಪಿಸಲಿ ಸಿದ್ದನಗುತ್ತಾನೆ.ಅವನ ಪತ್ನಿಯೇ ಇದಕ್ಕೆ ವಿರುದ್ದವಾಗಿ ನಿಂತು ವಿಚ್ಛೇದನಕ್ಕೆ ಮುಂದಾಗುತ್ತಾಳೆ. ನಿಜ ಜೀವನದಲ್ಲಿ ಸ್ವಚ್ಛತೆಯನ್ನು ಅಳವಡಿಸಿಕೊಂಡಿರುವುದನ್ನು ಈ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ.
Pingback: Regression Testing