ಸುವರ್ಣ ಸುಂದರಿ 45 ನಿಮಿಷದ ಗ್ರಾಫಿಕ್ಸ್

ಇದೇ ತಿಂಗಳು 31 ರಂದು ಬಿಡುಗಡೆಗೆ ಸಜ್ಜಾಗಿರುವ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗಿರುವ `ಸುವರ್ಣ ಸುಂದರಿ’ ಚಿತ್ರಕ್ಕೆ ಒಟ್ಟಾರೆ 45 ನಿಮಿಷದ ಗ್ರಾಫಿಕ್ಸ್ ಚಮತ್ಕಾರವನ್ನು ಅಳವಡಿಸಲಾಗಿದೆ. ಹೆಸರಾಂತ ಕಲಾವಿದರುಗಳಾದ ಡಾ ಜಯಪ್ರದಾ, ಸಾಯಿಕುಮಾರ್, ಸಾಕ್ಷಿ, ಪೂರ್ಣ, ತಿಲಕ್, ಅವಿನಾಷ್, ಜೈ ಜಗದೀಶ್, ಕುಕ್ತರ್ ಖಾನ್, ಶಾನ್ ಹಾಗೂ ಇತರರು ಚಿತ್ರದಲ್ಲಿದ್ದಾರೆ. ಇದು 1508 ರಿಂದ 2018 ರ ವರೆಗೆ ಜರುಗುವ ಕಥೆ. ಬೆಂಗಳೂರು, ಚಿಕ್ಕಮಗಳೂರು, ಕೇರಳ, ಅನಂತಪುರ ಮತ್ತು ಹೈದರಾಬಾದಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಿರ್ದೇಶಕ ಎಂ ಎಸ್ ಎನ್ ಸೂರ್ಯ ಅವರ ಸಹೋದರಿ ಎಂ ಎನ್ ಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ. ಸಾಯಿ ಕಾರ್ತಿಕ್ ಸಂಗೀತ ಹಾಗೂ ರೀ ರೆಕಾರ್ಡಿಂಗ್ ಮಾಡಿದ್ದಾರೆ. ರಾಮ್ ಸುಂಕರ್ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ. ಇದು ಎಸ್ ಟೀಮ್ ಪಿಕ್ಚರ್ ನಿರ್ಮಾಣ. ವೈ, ಈಶ್ವರ್ ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!