ಚಿತ್ರ: ಸೂತ್ರಧಾರಿ
ನಿರ್ದೇಶನ: ಕಿರಣ್ ಕುಮಾರ್
ನಿರ್ಮಾಣ: ನವರಸನ್
ತಾರಾಗಣ: ಚಂದನ್ ಶೆಟ್ಟಿ, ಅಪೂರ್ವ, ಸಂಜನಾ ಆನಂದ್, ಪ್ರಶಾಂತ್ ನಟನ, ಸಂಜಯ್ ಗೌಡ ಇತರರು
ರೇಟಿಂಗ್: 3.5
ಕೊಲೆಗಳ ಹಿಂದಿರುವ ನೋವಿನ ಕಥೆಯನ್ನು ಹೇಳುತ್ತದೆ ಈ ವಾರ ತೆರೆಗೆ ಬಂದಿರುವ ಸೂತ್ರಧಾರಿ ಸಿನಿಮಾ.
ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸೂತ್ರಧಾರಿ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿಯ ಕಥೆ ಹೊಂದಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಚಂದನ್ ಶೆಟ್ಟಿ ಯಾವ ರೀತಿ ಕೊಲೆಯ ರಹಸ್ಯಗಳನ್ನು ಭೇದಿಸುತ್ತಾರೆ ಎನ್ನುವುದು ಚಿತ್ರದ ಕಥೆ ಆಗಿದೆ. ಅಪರಾಧಿ ಸಿಗುತ್ತಾನೆ ಎನ್ನುವ ಹೊತ್ತಿಗೆ ಹೊಸ ಸತ್ಯಗಳು ಹೊರ ಬರುತ್ತವೆ. ಇವುಗಳು ಏನು ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಂದನ್ ಶೆಟ್ಟಿ ಅವರು ಹುಡುಗಿಯರನ್ನು ಕಂಡರೆ ಫ್ಲರ್ಟ್ ಮಾಡುವ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ತನಿಖೆಯ ಜಾಡಿನಲ್ಲಿ ಅವರಿಗೆ ಅಮಾಯಕ ಪ್ರೇಮಿಯ ಕಥೆ ತಿಳಿಯುತ್ತದೆ. ಕೊಲೆಯ ಷಡ್ಯಂತ್ರಗಳನ್ನು ಹೇಗೆ ಭೇದಿಸುತ್ತಾರೆ ಎನ್ನುವುದಕ್ಕೆ ಈ ಚಿತ್ರವನ್ನು ನೋಡಬಹುದು.
ನಿರ್ದೇಶಕರು ಚಿತ್ರದಲ್ಲಿ ಜೀವನದಲ್ಲಿ ಕನಸು ಹೊತ್ತವರಿಗೆ ದುರಂತ ಸಂಭವಿಸಿದಾಗ ಯಾವ ವ್ಯತ್ಯಾಸ ಆಗುತ್ತದೆ ಎನ್ನುವುದನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಚಂದನ್ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ನಾಯಕಿ ಅಪೂರ್ವ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಸಂಜನಾ ಆನಂದ್ ಹಾಡೊಂದರಲ್ಲಿ ಗಮನ ಸೆಳೆಯುತ್ತಾರೆ. ಚಿತ್ರದ ಕೇಂದ್ರಬಿಂದುವಾಗಿ ನವರಸನ್ ಪಾತ್ರ ಗಮನ ಸೆಳೆಯುತ್ತದೆ. ತಬಲಾ ನಾಣಿ ಪಂಚಿಂಗ್ ಡೈಲಾಗ್ಸ್ ಹೈಲೈಟ್ ಆಗಿದೆ.
ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ನೋಡುವವರಿಗೆ ಈ ಚಿತ್ರ ಇಷ್ಟ ಆಗಬಹುದು.

Be the first to comment