‘ಪರಮೇಶ ಪಾನವಾಲಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸುರ್ವೀನ್ ಚಾವ್ಲಾ ಚಿತ್ರರಂಗದ ಕರಾಳ ಸತ್ಯವನ್ನು ತೆರೆದಿಟ್ಟಿದ್ದಾರೆ.
ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುರ್ವೀನ್ ಚಾವ್ಲಾ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ದಪ್ಪ ಇರಬೇಕು. ನೀವು ತುಂಬಾ ತೆಳ್ಳಗಿದ್ದೀರಿ. ನಿಮ್ಮ ದೇಹದ ಯಾವ ಭಾಗ ಕೂಡ ಪುಟಿಯುವುದಿಲ್ಲ ಎಂದು ನನಗೆ ಹೇಳಿದ್ದರು ಎಂದಿದ್ದಾರೆ.
ಈಗ ಆದರೆ ಈ ರೀತಿ ಮಾತನಾಡಲು ಸ್ವಲ್ಪ ಯೋಚನೆ ಮಾಡ್ತಾರೆ. ಆದರೆ ನಾನು ಸೌತ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ನನ್ನ ದೇಹದ ಕುರಿತು ನನ್ನ ಮುಖಕ್ಕೆ ಹೊಡೆದಂತೆ ಕಾಮೆಂಟ್ ಮಾಡುತ್ತಿದ್ದರು. ನನ್ನ ದೇಹಾಕೃತಿಯನ್ನು ಟೀಕಿಸಿದ್ದಕ್ಕೆ ನಾನು ಹಲವು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸುರ್ವೀನ್ ಚಾವ್ಲಾ ಇಂಡಸ್ಟ್ರೀಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಅವಕಾಶ ನೀಡುವ ನೆಪದಲ್ಲಿ ಮದುವೆಯ ನಂತರ ಖ್ಯಾತ ನಿರ್ದೇಶಕರೊಬ್ಬರು ನನಗೆ ಕಿಸ್ ಮಾಡಲು ಮುಂದಾಗಿದ್ದರು. ಬಹುತೇಕ ನನ್ನನ್ನೂ ಅವರು ಚುಂಬಿಸಿಯೇ ಬಿಟ್ಟಿದ್ದರು. ಆದರೆ ನಾನು ಆ ನಿರ್ದೇಶಕನನ್ನು ಹಿಂದಕ್ಕೆ ತಳ್ಳಿದೆ. ಅವರ ಈ ನಡುವಳಿಕೆಯಿಂದ ನನಗೆ ಆಘಾತವಾಗಿತ್ತು ಎಂದು ಹೇಳಿದ್ದಾರೆ.
ಶಿವಣ್ಣ ಅಭಿನಯದ ‘ಪರಮೇಶ ಪಾನವಾಲಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸುರ್ವೀನ್ ಚಾವ್ಲಾ, ತೆಲುಗಿನ ‘ರಾಜು ಮಹಾರಾಜು’ ಚಿತ್ರ, ಪಂಜಾಬಿ ಮತ್ತು ಹಿಂದಿ ಭಾಷೆಯಲ್ಲಿ ಅಭಿನಯಿಸಿದ್ದಾರೆ.





Be the first to comment