ʼಅವಕಾಶಕ್ಕೆ ಎದೆಯ ಅಳತೆ ಕೇಳಿದ್ದರುʼ ಎಂದ ನಟಿ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಅವಕಾಶ ಸಿಗಲು ಕಾಸ್ಟಿಂಗ್ ಕೌಚ್ ಹೆಚ್ಚು ಚಾಲ್ತಿಯಲ್ಲಿದೆ. ಸಿನಿಮಾದಲದಲಿ ವೃತ್ತಿ ಬದುಕು ಆರಂಭಿಸಿದಾಗ ಚಿತ್ರತಂಡದ ಸದಸ್ಯರು ಎದೆಯ ಅಳತೆ ಕೇಳಿದ್ದರು ಎಂದು ಉತ್ತರ ಭಾರತದ ನಟಿ ಸುರ್ವೀನ್ ಚಾವ್ಲಾ ಆರೋಪಿಸಿದ್ದಾರೆ.

ಶಿವರಾಜ್ ಕುಮಾರ್ ನಟನೆಯ ‘ಪರಮೇಶಿ ಪಾನ್‌ವಾಲ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ಸುರ್ವೀನ್ ಚಾವ್ಲಾ, ನಟಿಯರನ್ನು ಹೇಗೆ ಚಿತ್ರರಂಗ ನಡೆಸಿಕೊಳ್ಳುತ್ತದೆ ಎನ್ನುವುದನ್ನು ಬೇಸರದಿಂದ ಹೇಳಿದ್ದಾರೆ. ಮೊದಲು ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸುರ್ವೀನ್ ಚಾವ್ಲಾ ತಾವು ಎದುರಿಸಿದ ಮೊದಲ ಸಿನಿಮಾ ಆಡಿಷನ್‌ನಲ್ಲಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದನ್ನು ಬೇಸರದಿಂದ ವಿವರಿಸಿದ್ದಾರೆ.

“‘ಮುಂಬೈನಲ್ಲಿ ನಾನು ಮೊದಲ ಸಿನಿಮಾ ಆಡಿಷನ್ ಅಟೆಂಡ್ ಮಾಡಿದ್ದೆ. ಅಲ್ಲಿ ನನ್ನ ತೂಕದ ಬಗ್ಗೆ ಪ್ರಶ್ನೆ ಮಾಡಲಾಯಿತು. ನೀನು 56 ಕೆಜಿ ಇದ್ದರೆ ಸಿನಿಮಾದಲ್ಲಿ ಅವಕಾಶಗಳು ಸಿಗುವುದಿಲ್ಲ ಎಂದರು. ಅಲ್ಲದೆ, ನನ್ನ ಎದೆಯ ಅಳತೆಯನ್ನು ಸಹ ಅವರು ಕೇಳಿದ್ದರು” ಎಂದು ಅವರು ಹೇಳಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಕಾಸ್ಟಿಂಗ್ ಕೌಚ್ ಅನುಭವ ಎದುರಿಸಿರುವುದಾಗಿ ನಟಿ ಹೇಳಿದ್ದಾರೆ.

” ಮುಂಬೈಯಲ್ಲಿ ಬಾಡಿ ಶೇಮಿಂಗ್ ಎದುರಿಸಿದ ಬಳಿಕ ದಕ್ಷಿಣ ಭಾರತದಲ್ಲಿ ಸಾಕಷ್ಟು ಕಾಸ್ಟಿಂಗ್ ಕೌಚ್ ಅನುಭವಿಸಿದೆ. ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿದೆ. ಆದರೆ ನಟಿಯನ್ನು ಸಿನಿಮಾಕ್ಕೆ ಆಯ್ಕೆ ಮಾಡಲು ಅದು ಪ್ರಮಾಣವಾಗಬಾರದು. ಅಂಥ ಅನುಭವ ಆದಾಗ ಚಿತ್ರರಂಗವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ ಎನ್ನುವ ಬೇಸರ ಮೂಡಿದ್ದಿದೆ” ಎಂದು ಸುರ್ವೀನ್ ಚಾವ್ಲಾ ತಿಳಿಸಿದ್ದಾರೆ.

ಸುರ್ವೀನ್ ಚಾವ್ಲಾ ತೆಲುಗಿನ ‘ರಾಜಾ ಮಹಾರಾಜ’, ತಮಿಳಿನ ‘ಮೂಂಡ್ರು ಪೇರ್ ಮೂಂಡ್ರು ಕಾದಲ್’, ‘ಪುತಿಯಾ ತಿರುಪ್ಪಂಗಳ್’, ‘ಜೈ ಹಿಂದ್ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿಯೂ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆಗಾಗ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ತಮ್ಮ ಕೆಟ್ಟ ಅನುಭವವನ್ನು ವಿವರಿಸುತ್ತಿದ್ದು, ಉತ್ತಮ ನಟಿ ಆಗಬೇಕು ಎಂದು ಚಿತ್ರರಂಗದ ಕಡೆಗೆ ಬರುವ ಉದಯೋನ್ಮುಖ ನಟಿಯರಿಗೆ ಈ ಬೆಳವಣಿಗೆ ಕನಸಿಗೆ ತಣ್ಣೀರು ಎರಚುತ್ತಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!