ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರತಂಡ ಮೇ 16ರ ಸಂಜೆ 5 ಗಂಟೆ 5 ಸಿಮಿಷಕ್ಕೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಲು ಸಿದ್ಧವಾಗಿದೆ.
ಸುದೀಪ್ ಸಿನಿಮಾ ಟೀಸರ್ ನೋಡಿ ಫ್ಯಾನ್ಸ್ ಫುಲ್ ಖುಷಿ ಆಗಿದ್ದಾರೆ. ಬಾಲಿವುಡ್ ನಟರು ಕೂಡ ‘ವಿಕ್ರಾಂತ್ ರೋಣ’ ಟೀಸರ್ ನೋಡಿ ಫುಲ್ ಮಾರ್ಕ್ಸ್ ನೀಡಿದ್ದಾರೆ. ಟೀಸರ್ ಬಳಿಕ ಚಿತ್ರದ ಟ್ರೈಲರ್ ರಿಲೀಸ್ ಆಗಬಹುದಾ ಅನ್ನೋ ಕುತೂಹಲಕ್ಕೆ ಇಂದು ಸಂಜೆವರೆಗೆ ಕಾಯಬೇಕಿದೆ.
ಜುಲೈ 28ಕ್ಕೆ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಟ್ವಿಟ್ಟರ್‌ನಲ್ಲಿ ಹೊಸ ಘೋಷಣೆ ಮಾಡಿರುವ ಕಿಚ್ಚ ಸುದೀಪ್, ಅಭಿಮಾನಿಗಳ ಕಾತರ ಹೆಚ್ಚಾಗುವಂತೆ ಮಾಡಿದ್ದಾರೆ.
ವಿಕ್ರಾಂತ್ ರೋಣ’ ಟೀಸರ್ ನೋಡಿದ್ದ ಫ್ಯಾನ್ಸ್‌ಗೆ ಯಾವ ಸರ್ಪ್ರೈಸ್ ಸಿಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರದಲ್ಲಿ ನಟಿಸಿರುವುದು ಸಾಕಷ್ಟು ನಿರೀಕ್ಷೆಗೆ ಕಾರಣವಾಗಿದೆ.
ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಪೋಸ್ಟರ್ ರಿಲೀಸ್ ಆಗಿದೆ. ‘ಗದಂಗ್ ರಕ್ಕಮ್ಮ’ ಎಂಬ ರಗಡ್ ಪಾತ್ರದಲ್ಲಿ ಶ್ರೀಲಂಕಾ ಚೆಲುವೆ ಜಾಕ್ವೆಲಿನ್ ನಟಿಸುತ್ತಿದ್ದು ಈ ಪೋಸ್ಟರ್ ಈಗಾಗಲೇ ಚಿತ್ರ ಪ್ರೇಮಿಗಳ ಗಮನ ಸೆಳೆದಿದೆ.
ಭಾರತೀಯ ಸಿನಿಮಾಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ ಚಿತ್ರಗಳ ಬಗ್ಗೆ ಐಎಂಡಿಬಿ ಸಂಸ್ಥೆ ಪ್ರಕಟಿಸಿದ ಪಟ್ಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನ ಪಡೆದಿತ್ತು.
_______

Be the first to comment