ಸೂರಿ ವಾರ್ ಯಾರ ವಿರುದ್ಧ?

ಚಿತ್ರದಿಂದ ಚಿತ್ರಕ್ಕೆ ತಾನೊಬ್ಬ ಸಮರ್ಥ ಡೈರೆಕ್ಟರ್ ಎಂದು ನಿರೂಪಿಸುತ್ತಲೇ ಬಂದಿರುವ ವ್ಯಕ್ತಿಯ ಮುಂದಿನ ಚಿತ್ರದ ಬಗ್ಗೆ, ಆತನ ಪರ್‍ಮಿಶನ್ ಇಲ್ಲದೆಯೇ ಸಿನ್ಮಾ ಅನೌನ್ಸ್ ಮಾಡಿದರೆ ಹೇಗಿರಬಹುದು? ಸಹಜವಾಗಿಯೇ ಅಸಮಾಧಾನವಾಗಬಹುದು. ಈಗ ನಿರ್ಮಾಪಕ ಕೆಪಿಎಸ್(ಕೆ.ಪಿ.ಶ್ರೀಕಾಂತ್) ಮತ್ತು ಡೈರೆಕ್ಟರ್ ಸೂರಿ ಮಧ್ಯೆ ಇಂಥದ್ದೊಂದು ಬೆಳವಣಿಗೆ ನಡೆದು ಹೋಗಿದೆ. ಸ್ಟೋರಿ ಓದಿ..

‘ಸೋಶಿಯಲ್ಲಿ ಮಿಡಿಯಾಗಳಲ್ಲಿ ನನ್ನಲ್ಲಿ ಒಂದು ಮಾತೂ ಹೇಳದೆ, ನನ್ನ ಮುಂದಿನ ಚಿತ್ರದ ಬಗ್ಗೆ ಮಾತನಾಡುವವರ ಬಗ್ಗೆ ಎಚ್ಚರದಿಂದಿರಬೇಕು. ಅಸಲಿ ಸತ್ಯವನ್ನು ಜನ ತಿಳಿದುಕೊಳ್ಳಬೇಕು’’ ಎಂದು ಸೂರಿ ಹೇಳಿದ್ದಾರೆ.
‘ನಟ ಸುದೀಪ್ ಅವರ ಮುಂದಿನ ಸಿನಿಮಾವನ್ನು ಸೂರಿ ನಿರ್ದೇಶಿಸುತ್ತಾರೆ’’ ಎಂದು ನಿರ್ಮಾಪಕ ಕೆಪಿಎಸ್ ಹೇಳಿದ್ದರು. ಈ ವಿಷಯ ಸಾಕಷ್ಟು ವೈರಲ್ ಆಗಿತ್ತು. ಈ ವಿಷಯವಾಗಿ ಗರಂ ಆಗಿರುವ ಸೂರಿ, ‘ನನ್ನ ಹೆಸರಿನಲ್ಲಿ ಏನೆಲ್ಲಾ ಕೇಳಿಬರುತ್ತಿದೆಯೋ ಅದೆಲ್ಲಾ ಸುಳ್ಳು,
ನನ್ನ ಕೆಲಸದ ಬಗ್ಗೆ ನಾನೂ ಎಲ್ಲಿಯೂ ನನ್ನ ಚಿತ್ರದ ಸಿದ್ಧತೆ ಮಾಡದೆ ಹೇಳಿಕೊಳ್ಳುವುದಿಲ್ಲ. ಈ ರೀತಿಯ ನನ್ನ ಕೆಲಸದ ಬಗ್ಗೆ ಸೋಶಿಯಲ್ ಮಿಡಿಯಾಗಳಲ್ಲಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಸಲ ಸುಳ್ಳು ಸುದ್ದಿಗಳು ವರದಿಯಾಗುತ್ತಲೇ ಇವೆ. ನಾನು ಈ ಸಂಬಂಧ ಮೂರು ಬಾರಿ ಸೈಬರ್ ಕ್ರೈಂ ಸೆಲ್ ಗೆ ದೂರು ನೀಡಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನಾನು ಮೊಬೈಲ್ ನ ಇನ್ ಬಾಕ್ಸ್ ನಲ್ಲಿ ಮಾತ್ರ ಮೆಸೇಜ್ ಮಾಡುವುದು. ಮತ್ತು ಇ ಮೇಲ್ ಅಕೌಂಟ್ ಇದೆ, ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಯಾವುದೇ ಆಡಿಶನ್ ರಿಕ್ವೇಸ್ಟ್ ಕಳಿಸಿಲ್ಲ, ನನ್ನ ಮುಂದಿನ ಸಿನಿಮಾ ಬಗ್ಗೆ ಯಾವ ನಿರ್ಮಾಪಕರು ತಮಗೆ ಖುಶಿ ಬಂದತೆ ನನ್ನ ಅರಿವಿಗೂ ಬಾರದಂತೆ ನನ್ನ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಬೇಕಿಲ್ಲ’’ ಎಂದು ಹೇಳಿದ್ದಾರೆ.
ಸುದೀಪ್ ಅವರ ಮುಂದಿನ ಸಿನಿಮಾವನ್ನು ಸೂರಿ ನಿರ್ದೇಶಿಸಲಿದ್ದಾರೆ ಎಂಬ ನಿರ್ಮಾಪಕ ಕೆಪಿಎಸ್ ಅವರ ಬೇಜಾವಾಬ್ದಾರಿಯ ಹೇಳಿಕೆಗೆ, ‘ಸುದೀಪ್ ಅವರನ್ನು ನಾನು ‘ರಂಗ ಎಸ್.ಎಸ್.ಎಲ್.ಸಿ’’ಯಿಂದ ನೋಡಿದ್ದೇನೆ, ಅವರೊಬ್ಬ ಉತ್ತಮ ನಟ, ಅವರಿಗಾಗಿ ಕೆಲಸ ಮಾಡಬೇಕೆಂದರ ಸಮಯ

ಕೆಪಿಎಸ್‍ತೆಗೆದುಕೊಳ್ಳುತ್ತೇನೆ, ವಿಭಿನ್ನವಾಗಿ ಅವರಿಗಾಗಿ ನಾನು ಸಿದ್ಧತೆ ಮಾಡಿಕೊಳ್ಳಬೇಕು, ಆಗ ಮಾತ್ರ ಅವರ ಜೊತೆ ಕೆಲಸ ಮಾಡಲು ಸಾಧ್ಯ,. ಅದನ್ನು ನಾನು ಹಿಂದೆ ಅವರ ಜೊತೆ ಮಾತನಾಡಿದ್ದಾಗ ತಿಳಿಸಿದ್ದೇನೆ.ಸಮಯದ ಮಿತಿಯಲ್ಲಿ ಕೆಲಸ ಮಾಡಲು ಅವರು ಇಷ್ಟ ಪಡುವುದಿಲ್ಲ, ಸದ್ಯ ನನ್ನ ಮುಂದಿನ ಸಿನಿಮಾಗಾಗಿ ಕೆಲಸ ನಡೆಯುತ್ತಿದೆ, ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾಗಾಗಿ ಕೆಲಸ ನಡೆಯುತ್ತಿದೆ, ಮುಂದಿನದ್ದು `ಕಾಗೆ ಬಂಗಾರ’ ಎಂದು’’ ಪಕ್ಕಾ ಸೂರಿ ಸ್ಟೈಲ್‍ನಲ್ಲಿ ಕೆಪಿಎಸ್‍ಗೆ ವಾರ್ನ್ ಮಾಡುವ ರೀತಿಯಲ್ಲಿ ಹೇಳಿದ್ದಾರೆ.
ಈ ಹಿಂದೆ ಕೆಪಿಎಸ್ ಮತ್ತು ಸೂರಿ `ಟಗರು’ ಸಿನಿಮಾಗಾಗಿ ಕೆಲಸ ಮಾಡಿದ್ದರು. ಮತ್ತೊಂದು ಸಿನಿಮಾಗಾಗಿ ಒಟ್ಟಿಗೆ ಸೇರಿದ್ದರು, ಆದರೆ ಕೆಲವು ದಿನಗಳ ನಂತರ ಚಿತ್ರದಿಂದ ಹೊರ ಬಂದರು ಹೀಗಾಗಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಸುಧೀರ್ ನಿರ್ಮಾಪಕರಾಗಿ ಬದಲಾದರು. ಕೆಪಿಎಸ್ ಬಹುದಿನಗಳಿಂದ ಇವರಬ್ಬರ ನಡುವೆ ಹೊಗೆಯಾಡುತ್ತಿದ್ದ ಅಸಮಾಧಾನ ಈಗ ಹೊರಬಿದ್ದಿದೆ ಅಷ್ಟೇ ಅನ್ನೋದು ಗಾಂಧಿನಗರದ ಮಂದಿಯ ಅಂಬೋಣ.

ವಿಷ್ಯ ಏನೇ ಇರಲಿ, ಡೈರೆಕ್ಟರ್‍ಗಳ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ನಿರ್ಮಾಪಕರು ತೆಗೆದುಕೊಳ್ಳುವುದರ ಬಗ್ಗೆ ಗುಡುಗಿರುವ ಸೂರಿ ಸಾಕಷ್ಟು ನಿರ್ಮಾಪಕರಿಗೆ ಹೇಳಿದ ಪಾಠ ಕೂಡ ಹೌದು. ನಿರ್ದೇಶಕನ ಪೂರ್ವತಯಾರಿಯ ಬಗ್ಗೆ ಕಿಂಚಿನಿತೂ ಅರಿವಿಲ್ಲದ ಕೆಪಿಎಸ್‍ನಂತಹ ನಿರ್ಮಾಪಕರು ಇನ್ನಾದರೂ ಸಿನ್ಮಾ ಅನ್ನೋದು ಕೇವಲ ‘ದುಡ್ಡು ಹಾಕಿ ದುಡ್ಡು ತೆಗೆಯುವ ಉದ್ಯಮ’ ಎಂದು ಅಂದುಕೊಳ್ಳುವುದರ ಜೊತೆಗೆ ನಿರ್ದೇಶಕರ ಮಾತಿಗೂ ಒಂದಿಷ್ಟು ಬೆಲೆ ಕೊಟ್ಟರೆ ಒಳ್ಳೆಯದು.

***************************

This Article Has 1 Comment
  1. Pingback: Köp Tramadol online

Leave a Reply

Your email address will not be published. Required fields are marked *

Translate »
error: Content is protected !!