ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಚೊಚ್ಚಲ ನಿರ್ದೇಶನದ ‘ಜೈ’ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ತುಳು ಮೂಲದ ಸುನೀಲ್ ಶೆಟ್ಟಿ, ತುಳು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ ‘ಜೈ’ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
‘ನನಗೆ ನಿರ್ಮಾಪಕರೊಬ್ಬರ ಮೂಲಕ ಸುನೀಲ್ ಶೆಟ್ಟಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಸಿನಿಮಾದ ಬಗ್ಗೆ ನಾನು ಮಾತನಾಡುತ್ತೇನೆಂಬ ಯೋಚನೆ ಅವರಿಗಿರಲಿಲ್ಲ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಹೋದೆ. ನಾನು ಅವರನ್ನು ಭೇಟಿಯಾಗುತ್ತೇನೆ ಮತ್ತು ಫೋಟೊ ತೆಗೆದುಕೊಂಡು ಬರುತ್ತೇನೆ ಎಂದು ಭಾವಿಸಿದ್ದೆ. ಅಚ್ಚರಿ ಎಂದರೆ ಮಂಗಳೂರಿನಲ್ಲಿ ನಡೆಯುವ ‘ಜೈ’ ಕಥೆಯನ್ನು ಹೇಳಲು ನನಗೆ ಐದು ನಿಮಿಷ ಸಮಯ ಸಿಕ್ಕಿತು. ಅದು ಅವರ ಆಸಕ್ತಿಯನ್ನು ಕೆರಳಿಸಿತು’ ಎಂದು ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದ್ದಾರೆ.
‘ಕಥೆ ಕೇಳಿದ ಬಳಿಕ ಅವರ ಉತ್ಸಾಹವನ್ನು ಕಂಡ ನಾನು ಆ ಪಾತ್ರದಲ್ಲಿ ನಟಿಸುವಂತೆ ಕೇಳಿದೆ. ಅದಕ್ಕೆ ಅವರು ಒಪ್ಪಿಗೆ ನೀಡಿದರು. ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಅವರೊಂದಿಗೆ ಚಿತ್ರೀಕರಣ ಮಾಡುವುದು ನನ್ನ ಜೀವನದ ದೊಡ್ಡ ಅನುಭವವಾಗಿದೆ. ಕೇವಲ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. 2025ರ ದ್ವಿತೀಯಾರ್ಧದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

Be the first to comment