ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ತಮ್ಮ ಮಾತೃಭಾಷೆ ತುಳುವಿನಲ್ಲಿ ನಟಿಸಿರುವ ಸಿನಿಮಾ ‘ಜೈ’ ಬಗ್ಗೆ ಬಾಲಿವುಡ್ ವೇದಿಕೆಯಲ್ಲಿ ಹೆಮ್ಮೆಯಿಂದ ಮಾತನಾಡಿದ್ದಾರೆ.
ಹಿಂದಿಯ ಜನಪ್ರಿಯ ಸಂದರ್ಶನ ಶೋ ‘ಲಲ್ಲನ್ಟಾಪ್’ನಲ್ಲಿ ಭಾಗವಹಿಸಿದ್ದ ಸುನಿಲ್ ಶೆಟ್ಟಿ, ‘ಜೈ ಸಿನಿಮಾ ನನ್ನ ಮೊದಲ ಸಿನಿಮಾ ‘ಬಲವಾನ್’ ನಂತರ ನನಗೆ ಸಿಕ್ಕಿರುವ ಅತ್ಯುತ್ತಮ ಮೆಚ್ಚುಗೆ. ನನ್ನ ನಟನೆಗೆ ಬಹಳ ಪ್ರಶಂಸೆ ವ್ಯಕ್ತವಾಗುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ತುಳು ಸಿನಿಮಾಗಳಿಗೆ ವೀಕ್ಷಕರ ಸಂಖ್ಯೆ ಕಡಿಮೆ. ಆದರೆ ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಬೆಂಬಲ ನೀಡಬೇಕೆಂಬ ಉದ್ದೇಶದಿಂದ ನಾನು ಈ ಸಿನಿಮಾದಲ್ಲಿ ನಟಿಸಿದೆ. ಈಗ ಸಿನಿಮಾಗಳಿಗೆ ಭಾಷೆಯ ಗಡಿ ಇಲ್ಲ. ಇರುವುದು ಕಂಟೆಂಟ್‌ನ ಗಡಿ ಮಾತ್ರ. ಒಳ್ಳೆಯ ವಿಷಯ ಇದ್ದರೆ ಯಾವ ಭಾಷೆಯಾದರೂ ಜನ ಒಪ್ಪಿಕೊಳ್ಳುತ್ತಾರೆ” ಎಂದು ಹೇಳಿದರು.
‘ಜೈ’ ಸಿನಿಮಾದಲ್ಲಿ ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ನಿರ್ದೇಶನ ಸಹ ಅವರದೇ. ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಮಂಗಳೂರು ಮೂಲದವರಾದ ಸುನಿಲ್ ಶೆಟ್ಟಿ ದಶಕಗಳಿಂದ ಬಾಲಿವುಡ್‌ನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ.
—-





Be the first to comment