ಬೆಂಗಳೂರು: ಹಿರಿಯ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರು, ಇಂಡಿಯನ್ ವರ್ಚುವಲ್ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿನಿಮಾ ನಿರ್ದೇಶನ ಕ್ಷೇತ್ರದಲ್ಲಿನ ಸಾಧನೆಗಾಗಿ ದೇಸಾಯಿ ಅವರಿಗೆ ಎಕ್ಸೆಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾ ಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ತರ್ಕ ಅನ್ನೋ ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮೂಲಕ ತಮ್ಮ ಸಿನಿ ಜೀವನ ಆರಂಭಿಸಿದ ಸುನೀಲ್ ಕುಮಾರ್ ದೇಸಾಯಿ ಉತ್ಕರ್ಷ, ಸಂಘರ್ಷ, ನಿಷ್ಕರ್ಷ, ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೇ, ಮರ್ಮ, ಪರ್ವ, ಕ್ಷಣ ಕ್ಷಣ, …ರೆ ಹೀಗೆ ಹಲವು ಹತ್ತು ವಿಭಿನ್ನ ಚಿತ್ರಗಳನ್ನು ಕನ್ನಡ ಸಿನಿರಸಿಕರಿಗೆ ನೀಡಿದ ಖ್ಯಾತಿ ಇವರದ್ದು. ಸದ್ಯ ಉದ್ಘರ್ಷ ಅನ್ನೋ ಪಂಚಭಾಷಾ ಚಿತ್ರ ನಿರ್ದೇಶಿಸಿರುವ ಸುನೀಲ್ ಕುಮಾರ್ ದೇಸಾಯಿ, ಆ ಚಿತ್ರದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ತಮಗೆ ಸಂದ ಈ ಗೌರವದ ಬಗ್ಗೆ ಸಂತಸ ಹಂಚಿಕೊಂಡಿರುವ ದೇಸಾಯಿ, ಈ ಗೌರವವನ್ನು ಕನ್ನಡಿಗರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಆ್ಯಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿಯ ಮಾಜಿ ವೈಸ್ ಚಾನ್ಸೆಲರ್ ಡಾ. ಸರ್ವಮಂಗಳ ಶಂಕರ್, ಕೌನ್ಸಿಲ್ ಆಫ್ ಚೈಲ್ಡ್ ಆ್ಯಂಡ್ ಯೂತ್ ಕೇರ್ನ ಮಾಜಿ ಸಿಇಓ ಅರುಣ್ ಕುಮಾರ್ ಬುನ್ಯಾನ್, ಸಂಗೀತ ನಿರ್ದೇಶಕ ಬಿ.ವಿ ಶ್ರಿನಿವಾಸ್, ಖ್ಯಾತ ಗಾಯಕಿ ಡಾ.ಬಿ.ಕೆ. ಸುಮಿತ್ರಾ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೌನ್ಸೆಲರ್ ಡಾ. ಎಲ್.ಎಸ್. ನಾರಾಯಣ ರೆಡ್ಡಿ ಭಾರ್ಗವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Tag : #Sunilkumar Desai #Kannada #Director
Pingback: DevOps Company