ಇತ್ತೀಚಿಗೆ ಬಿಡುಗಡೆಯಾಗಿರುವ “ಸಂಡೇ” ಕಿರುಚಿತ್ರ ಪ್ರಸ್ತುತ ಪೀಳಿಗೆಯ ಆಲೋಚನೆ ಹಾಗೂ ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಸಂದರ್ಭಗಳನ್ನು ಕಥಾವಸ್ತುವಾಗಿ ಹೊಂದಿದೆ. ಪ್ರತಿ ಕುಟುಂಬದಲ್ಲೂ ಇರುವ ಸಹಜ ಸಂಭಾಷಣೆಗಳನ್ನು ಸಾಧ್ಯವಾದಷ್ಟು ಸರಳ ರೀತಿಯಲ್ಲಿ ತೆರೆಗೆ ತರುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು.
ಈ ಕಿರುಚಿತ್ರದ ಮುಖ್ಯ ಭೂಮಿಕೆಯಲ್ಲಿ ಕನ್ನಡ ಚಲನಚಿತ್ರ ಮತ್ತು ಕಿರುತೆರೆ ನಟರಾದ ಅರುಣಾ ಬಾಲರಾಜ್, ಶ್ರುತಿ ರಘುನಂದ ಹಾಗೂ ವಿಜಯಲಕ್ಷ್ಮಿ ದೇವಿಯವರು ಅಭಿನಯಿಸಿದ್ದಾರೆ. 50 ಎಂಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕಿರುಚಿತ್ರಕ್ಕೆ ಫ್ಲಿಕ್ಕರಿಂಗ್ ಸ್ಟುಡಿಯೋ ಸಹನಿರ್ಮಾಣವಿದೆ.
ಈ ಹಿಂದೆ ಕಲಾ ನಿರ್ದೇಶನ ಮತ್ತು ಸಹ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಈಗ ಚಿತ್ರ ನಿರ್ದೇಶನದತ್ತ ಮುಖ ಮಾಡಿರುವ ಸುಸ್ಮಿತ ಸಮೀರ ಈ ಕಿರುಚಿತ್ರದ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ಹಾಗೂ ಹರ್ಷ್ ಚಂದ್ರಪ್ಪ, ದೀಪ್ತಿ ಮೋಹನ್ ತಾರಾಗಣದಲ್ಲಿ “ಅಭಿಜ್ಞಾನ” ಎಂಬ ಮ್ಯೂಸಿಕ್ ವೀಡಿಯೊವನ್ನು ಸಹ ಇವರು ನಿರ್ದೆಶಿಸಿದ್ದರು.
“ಸಂಡೇ” ಕಿರುಚಿತ್ರ ಹೊಸಬರನ್ನೇ ತನ್ನ ತಾಂತ್ರಿಕವರ್ಗದಲ್ಲಿ ಹೊಂದಿದ್ದು ಭಾನು ಪ್ರತಾಪ್ ಛಾಯಾಗ್ರಹಣ, ರಾಮನಾಥ್ ಶಾನಭಾಗ್ ಸಂಭಾಷಣೆ ಬರೆದಿದ್ದಾರೆ. ಗಿರೀಶ್ ಹೊತ್ತೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
Pingback: DevOps as a Service
Pingback: fuck doll