ಅಂಬರೀಶ್ ಪುಣ್ಯಸ್ಮರಣೆ ವೇಳೆ ಸುಮಲತಾ ಭಾವನಾತ್ಮಕ ಬರಹ

ರೆಬಲ್‍ ಸ್ಟಾರ್ ಅಂಬರೀಶ್ ನಿಧನರಾಗಿ ಇಂದಿಗೆ ಮೂರು ವರ್ಷ. ಈ ಸಂದರ್ಭದಲ್ಲಿ ಅಂಬಿ ಪುಣ್ಯತಿಥಿಯಂದು ಅಂಬರೀಶ್ ಪತ್ನಿ ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

ಕನ್ನಡದ ಹಿರಿಯ ನಟ ಅಂಬರೀಷ್​ 2018 ನವೆಂಬರ್​ 24 ರಂದು ನಿಧನರಾದರು. ಅವರನ್ನು ಕನ್ನಡ ಚಿತ್ರರಂಗ, ಅಭಿಮಾನಿಗಳು ಕಳೆದುಕೊಂಡು ಮೂರು ವರ್ಷ ಆಗಿದೆ. ಅಂಬರೀಶ್ ಇಲ್ಲದೇ ಮೂರು ವರ್ಷಗಳಾಗಿರುವ ಈ ಸಂದರ್ಭದಲ್ಲಿ ಇಂದು ಅವರ ಪುಣ್ಯಸ್ಮರಣೆ ನಡೆಯುತ್ತಿದ್ದು, ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು, ಸೆಲೆಬ್ರಿಟಿ ಒಡನಾಡಿಗಳು ಅಂಬಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಅಂಬರೀಷ್​ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಈ ವೇಳೆ ಸುಮಲತಾ ಅವರ ಆಪ್ತ ಬರಹ ಸಾಕಷ್ಟು ಗಮನ ಸೆಳೆಯುತ್ತಿದೆ.

ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ, “ಕಳೆದ ಮೂರು ವರ್ಷಗಳಿಂದ ನೀವು ನಮ್ಮ ಹೃದಯದಲ್ಲಿ, ಚಿಂತನೆಯಲ್ಲಿ ಮತ್ತು ಆತ್ಮದ ಜೊತೆಗೆ ಒಂದಾಗಿದ್ದೀರಿ. ಎಂದೆಂದಿಗೂ ನಿಮ್ಮನ್ನು ಪ್ರೀತಿಸುವೆ” ಎಂದು ಬರೆದುಕೊಂಡಿದ್ದಾರೆ.


ಅಂಬಿ ಅಭಿಮಾನಿಗಳು ಸಹ ಅಂಬರೀಶ್ ಅವರ ಪುಣ್ಯಸ್ಮರಣೆಯ ವೇಳೆ ಅವರನ್ನು ನೆನಪು ಮಾಡಿಕೊಂಡು ಕಂಬನಿ ಮಿಡಿದಿದ್ದಾರೆ.

ನವೆಂಬರ್​ 24ರಂದು 66ನೆಯ ವಯಸ್ಸಿನಲ್ಲಿ ಅಂಬರೀಷ್​ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!