ಸುಖೀಭವ

Movie Review: ಪ್ರೀತಿಯ ಷರತ್ತು ‘ಸುಖೀಭವ’

ಚಿತ್ರ: ಸುಖೀಭವ
ನಿರ್ದೇಶನ: ಎನ್ ಕೆ ರಾಜೇಶ್ ನಾಯ್ಡು
ತಾರಾ ಬಳಗ: ಮಹೇಂದ್ರ, ಸುಶ್ಮಿತಾ ನಾಯಕ್, ವಿಯಾಂಶಿ ಹೆಗ್ಡೆ, ಗೌರವ್ ಶೆಟ್ಟಿ, ರವಿಶಂಕರ್ ಗೌಡ, ಶೋಭರಾಜ್, ಇತರರು
ರೇಟಿಂಗ್: 3/5

ಪ್ರೀತಿ ನಿವೇದನೆ ಮಾಡುವ ಚಿಕ್ಕ ವಯಸ್ಸಿನ ಹುಡುಗನಿಗೆ ಹುಡುಗಿ ಹಾಕುವ ಷರತ್ತನ್ನು ಆ ಹುಡುಗ ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ಹೇಳುವ ಚಿತ್ರ ಸುಖೀಭವ.

ಈ ವಾರ ಬಿಡುಗಡೆ ಆಗಿರುವ ಸುಖಿಭವದಲ್ಲಿ ನಿರ್ದೇಶಕರು ಹರಿಹರೆಯದ ಮಕ್ಕಳು ಪ್ರೀತಿ ಆಕರ್ಷಣೆಗೆ ಒಳಗಾಗಿ ಮುಂದೆ ಜೀವನದಲ್ಲಿ ಅನುಭವಿಸುವ ಕಷ್ಟ ನಷ್ಟಗಳೇನು ಎನ್ನುವುದನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ಕಟ್ಟಿಕೊಡುವ ಯತ್ನವನ್ನು ಮಾಡಿದ್ದಾರೆ.

ಸಿನಿಮಾದ ನಾಯಕ ಫಸ್ಟ್ ಲವ್ ಬೆಸ್ಟ್ ಲವ್ ಎನ್ನುವ ರೀತಿಯಲ್ಲಿ ತಾನು ಮೊದಲಿಗೆ ಇಷ್ಟಪಟ್ಟ ಹುಡುಗಿ ಅವನ ಬದುಕಿನಲ್ಲಿ ಬೆಳಕಾಗಿ ಬರುತ್ತಾಳಾ? ಅವನು ಷರತ್ತು ಪಾಲನೆ ಮಾಡುತ್ತಾನಾ ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.

ನಿರ್ದೇಶಕರು ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ನೋಡುವಂತೆ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕನ ಪಾತ್ರದಲ್ಲಿ ನಟಿಸಿರುವ ಯುವ ನಟ ಮಹೇಂದ್ರ ತಮಗೆ ಸಿಕ್ಕಿರುವ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ನಾಯಕಿಯರ ಪಾತ್ರದಲ್ಲಿ ನಟಿಸಿರುವ ಸುಶ್ಮಿತಾ ನಾಯಕ್ ಮತ್ತು ವಿಯಾಂಶಿ ಹೆಗ್ಡೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಿರಿಯ ನಟರಾದ ರವಿಶಂಕರ್ ಗೌಡ, ಶೋಭರಾಜ್ ಪಾತ್ರ ವರ್ಗಕ್ಕೆ ಮೆರುಗು ತಂದು ಕೊಟ್ಟಿದ್ದಾರೆ.

ಚಿತ್ರದ ಕೆಲವು ಹಾಡುಗಳು ಇಂಪಾಗಿದೆ. ಪ್ರೇಮ ಕತೆಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಖುಷಿ ನೀಡಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!