ಸೆಪ್ಟೆಂಬರ್ 28 ಕ್ಕೆ‌ ʼಶುಗರ್ ಫ್ಯಾಕ್ಟರಿʼ ಟ್ರೈಲರ್ ರಿಲೀಸ್

ಡಾರ್ಲಿಂಗ್ ಕೃಷ್ಣ ಅಭಿನಯದ ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟ್ರೈಲರ್  ಸೆಪ್ಟೆಂಬರ್ 28 ರಂದು ಸಂಜೆ 5:11ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ.

ದೀಪಕ್ ಅರಸ್ ನಿರ್ದೇಶನದ , ಬಾಲಮಣಿ ಪ್ರೊಡಕ್ಷನ್ ಬ್ಯಾನರ್ ನಡಿ ಆರ್ ಗಿರೀಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಅದ್ವಿತಿ ಶೆಟ್ಟಿ, ಸೋನಾಲ್ ಮಂಟೇರೋ, ಶಿಲ್ಪಾ ಶೆಟ್ಟಿ ಸೇರಿದಂತೆ ಮೂವರು ನಾಯಕಿಯರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಸಂತೋಷ್ ರಾಯ್ ಛಾಯಾಗ್ರಹಣವಿದ್ದು, ಕೆ ಎಂ ಪ್ರಕಾಶ್ ಸಂಕಲನವಿದೆ. ಕಬೀರ್ ರಫಿ ಸಂಗೀತ ಸಂಯೋಜನೆ ನೀಡಿದ್ದಾರೆ.

ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಟ್ರೈಲರ್ ಬಿಡುಗಡೆಗೆ ಚಿತ್ರಪ್ರೇಮಿಗಳು ಎದುರು ನೋಡುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!