ಫ್ಲರ್ಟ್

ಫ್ಲರ್ಟ್ ಚಿತ್ರಕ್ಕೆ ಸುದೀಪ್ ಬೆಂಬಲ

ಚಂದನ್ ಕುಮಾರ್ ಅಭಿನಯಿಸಿ ಆಕ್ಷನ್ ಕಟ್ ಹೇಳುತ್ತಿರುವ ಫ್ಲರ್ಟ್ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಂಬಲ ನೀಡಿದ್ದಾರೆ.

ಚಿತ್ರದ ಹಾಡೊಂದಕ್ಕೆ ಸುದೀಪ್ ಧ್ವನಿಯಾಗಿದ್ದಾರೆ. ಫ್ರೆಂಡ್ಶಿಪ್ ಆಂಥೆಂಮ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಡಿನ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿ ಸುದೀಪ್ ಅವರು ವಿಡಿಯೋ ಮೂಲಕ ಚಂದನ್ ಗೆ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಚಂದನ್, ಸಿನಿಮಾದಲ್ಲಿ ಫ್ರೆಂಡ್ಶಿಪ್, ಲವ್, ಎಲ್ಲಾ ಎಂಟರ್ಟೈನಿಂಗ್ ಎಲಿಮೆಂಟ್ಸ್ ಇದೆ. ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದೇ ಎಂದರ್ಥ ಅಲ್ಲ. ಗಾಢವಾದ ಪ್ರೀತಿಯನ್ನು ಸಹ ಹೀಗೆ ಕರೆಯುತ್ತಾರೆ. ರಿಲೀಸ್ ಆಗಿರುವ ಫ್ರೆಂಡ್ಶಿಪ್ ಹಾಡನ್ನು ಸುದೀಪ್ ಹಾಡಿದ್ದಾರೆ ಎಂದು ತಿಳಿಸಿದರು.

ಶೃತಿ, ಸಾಧು ಕೋಕಿಲ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸ್ನೇಹಿತನಾಗಿ ಗಿರಿ ನಟಿಸಿದ್ದಾರೆ. ಅಕ್ಷತಾ ಗೋಪಣ್ಣ ಹಾಗೂ ನಿಮಿಕಾ ರತ್ನಾಕರ್ ಅವರು ನಾಯಕಿಯಾಗಿ ನಟಿಸಿದ್ದಾರೆ ಎಂದು ಹೇಳಿದರು.

ಸಾಧು ಕೋಕಿಲ ಮಾತನಾಡಿ, ನಿರ್ದೇಶಕರು ನಿರ್ಮಾಪಕ ಆದಾಗ ಜವಾಬ್ದಾರಿ ಹೆಚ್ಚಿರುತ್ತದೆ. ಒಳ್ಳೆಯ ಥಾಟ್ ಇಟ್ಟುಕೊಂಡು ಸಿನಿಮಾವನ್ನು ಮಾಡಿದ್ದಾರೆ. ಚಂದನ್ ಅವರ ನಿರ್ದೇಶನದ ಶೈಲಿ ಇಷ್ಟವಾಯಿತು ಎಂದು ಹೇಳಿದರು.

ನಾಯಕಿಯರಾದ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ಅವರು ಚಿತ್ರದ ಕಥೆ, ನಿರೂಪಣೆ ಭಿನ್ನವಾಗಿದೆ ಎಂದು ಹೇಳಿದರು.

ಚಿತ್ರದಲ್ಲಿ ಗಿರಿ, ಮೂಗು ಸುರೇಶ್ ಸೇರಿದಂತೆ ಹಲವು ತಾರೆಯರು ಅಭಿನಯಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!