ಪ್ರಧಾನಿ ನರೇಂದ್ರ ಮೋದಿ ಅವರ ಔತಣಕೂಟಕ್ಕೆ ಹೋಗದಿರುವ ಕುರಿತು ಕಿಚ್ಚ ಸುದೀಪ್ ಕಾರಣ ತಿಳಿಸಿದ್ದಾರೆ.
ಮೋದಿ ಜೊತೆಗಿನ ಔತಣ ಕೂಡದಲ್ಲಿ ಭಾಗಿಯಾಗಲು ತಮಗೂ ಆಹ್ವಾನವಿತ್ತು ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಆದರೆ ಜ್ವರದ ಕಾರಣದಿಂದಾಗಿ ನಾನು ಹೋಗಲಿಲ್ಲ ಎಂದಿದ್ದಾರೆ.
ಪ್ರಧಾನಿಯನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಜ್ವರ ಇದ್ದರಿಂದ ಭೇಟಿ ಸಾಧ್ಯವಾಗಲ್ಲ ಅನಿಸಿ ಹೋಗುವುದನ್ನು ಬಿಟ್ಟೆ ಎಂದು ಸುದೀಪ್ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನ ಕೆಲವು ಸೆಲೆಬ್ರಿಟಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಔತಣಕೂಟದಲ್ಲಿ ಭಾಗಿಯಾಗಿದ್ದರು. ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾಮಿಡಿಯನ್ ಶ್ರದ್ಧಾ, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು.
ಪ್ರಧಾನಿ ಭೇಟಿಗೆ ಸಂಬಂಧಿಸಿ ಕನ್ನಡ ಸಿನಿಮಾ ರಂಗದಲ್ಲಿ ಇನ್ನೂ ಅನೇಕ ಸಾಧಕರು ಇರುವಾಗ ಅವರನ್ನು ಯಾಕೆ ಕಡೆಗಣಿಸಲಾಯಿತು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಅದರಲ್ಲೂ ಶಿವರಾಜ್ ಕುಮಾರ್, ಸುದೀಪ್ ಸೇರಿದಂತೆ ಹಲವರನ್ನು ಮೋದಿ ಯಾಕೆ ಕರೆಯಲಿಲ್ಲ ಎನ್ನುವ ಚರ್ಚೆ ಹುಟ್ಟಿಕೊಂಡಿತ್ತು. ಇದೀಗ ಸುದೀಪ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
___

Be the first to comment