ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಗ್ರೀನ್ ಸಿಗ್ನಲ್

ಈ ಬಾರಿಯ ಬಿಗ್​ಬಾಸ್​ ಸೀಸನ್​ 12 ನಿರೂಪಣೆ ಮಾಡಲು ಕಿಚ್ಚ ಸುದೀಪ್ ಅವರು ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ ಎಂದು ಬಿಗ್​ಬಾಸ್​ ಟೀಮ್​ ಮಾಹಿತಿ ನೀಡಿದೆ.

ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3- 4 ತಿಂಗಳು ಬಾಕಿ ಇದೆ.  ಕಿಚ್ಚ ಸುದೀಪ್ ಅವರ ಮನಸ್ಸನ್ನ ಕಲರ್ಸ್ ಕನ್ನಡ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಮಾಡಿದ್ದು ಯಶಸ್ವಿಯಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 12ಕ್ಕೂ ಕಿಚ್ಚ ಸುದೀಪ್​ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಕಲರ್ಸ್ ಕನ್ನಡ ವಾಹಿನಿ  ಪ್ರೆಸ್‌ ಮೀಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಕನ್ನಡದ  ರಿಯಾಲಿಟಿ ಶೋ ಬಿಗ್‌ಬಾಸ್ 11 ಸೀಸನ್‌  ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದ  ನಿರೂಪಕ ಕಿಚ್ಚ ಸುದೀಪ್  11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಎಂದು ಅನೌನ್ಸ್ ಮಾಡಿದ್ದರು. ಕಿಚ್ಚ ಸುದೀಪ್ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು.
Be the first to comment

Leave a Reply

Your email address will not be published. Required fields are marked *

Translate »
error: Content is protected !!