ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವಾದ ಸೆಪ್ಟಂಬರ್ 2ರಂದು ‘ವಿಕ್ರಾಂತ್ ರೋಣ’ ಚಿತ್ರದ ಗ್ಲಿಮ್ಸ್ ವಿಡಿಯೋ ರಿಲೀಸ್ ಆಗಲಿದೆ.
ಸುದೀಪ್ ಅವರು 50ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದ ಭಾಗವಾಗಿ ಸೆಪ್ಟೆಂಬರ್ 2ರಂದು ಬೆಳಗ್ಗೆ 11.05ಕ್ಕೆ ‘ಡೆಡ್ ಮ್ಯಾನ್ಸ್ ಆಯಂಥಮ್’ ಸಾಂಗ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.
‘ವಿಕ್ರಾಂತ್ ರೋಣ’ ಚಿತ್ರ ಈಗಾಗಲೇ ಪೋಸ್ಟರ್ ಹಾಗೂ ಮೇಕಿಂಗ್ ಮೂಲಕ ಗಮನ ಸೆಳೆದಿದೆ. ಈಗ ಬಿಡುಗಡೆ ಆಗಲಿರುವ ಡೆಡ್ ಮ್ಯಾನ್ಸ್ ಆಯಂಥಮ್ ಸಾಂಗ್ ಚಿತ್ರಕ್ಕೆ ಇನ್ನಷ್ಟು ಮೆರುಗು ಕೊಡುವ ನಿರೀಕ್ಷೆ ಹೊಂದಲಾಗಿದೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರದಲ್ಲಿ ನಟಿಸಿರುವುದು ಸಾಕಷ್ಟು ನಿರೀಕ್ಷೆಗೆ ಕಾರಣವಾಗಿದೆ.
ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಪೋಸ್ಟರ್ ರಿಲೀಸ್ ಆಗಿದೆ. ‘ಗದಂಗ್ ರಕ್ಕಮ್ಮ’ ಎಂಬ ರಗಡ್ ಪಾತ್ರದಲ್ಲಿ ಶ್ರೀಲಂಕಾ ಚೆಲುವೆ ಜಾಕ್ವೆಲಿನ್ ನಟಿಸುತ್ತಿದ್ದು ಈ ಪೋಸ್ಟರ್ ಈಗಾಗಲೇ ಚಿತ್ರ ಪ್ರೇಮಿಗಳ ಗಮನ ಸೆಳೆದಿದೆ.
‘ವಿಕ್ರಾಂತ್ ರೋಣ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಗ್ಲಿಮ್ಸ್ ವಿಡಿಯೋ ರಿಲೀಸ್ ಟ್ರೀಟ್ ಆಗಲಿದೆ.
ಭಾರತೀಯ ಸಿನಿಮಾಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ ಚಿತ್ರಗಳ ಬಗ್ಗೆ ಐಎಂಡಿಬಿ ಸಂಸ್ಥೆ ಪ್ರಕಟಿಸಿದ ಪಟ್ಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ.






Be the first to comment