ಸುದೀಪ್

ಕಿಚ್ಚ ಬರ್ತ್‌ಡೇ ಸೆಲಬ್ರೇಷನ್ ಹೀಗಿದೆ

ನಟ ಸುದೀಪ್ ಅವರ 52ನೇ ಹುಟ್ಟುಹಬ್ಬವನ್ನು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ  ಸೆ.1ರ ರಾತ್ರಿ 9 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಚರಣೆ ಮಾಡಲು ಸುದೀಪ್ ಆಪ್ತರು ತೀರ್ಮಾನ ಮಾಡಿದ್ದಾರೆ.

ಸೆ. 2ರಂದು ಸುದೀಪ್ ಹುಟ್ಟುಹಬ್ಬವಿದೆ. ಪ್ರತಿವರ್ಷ ಜಯನಗರದ ಗ್ರೌಂಡ್‌ನಲ್ಲಿ ಸುದೀಪ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ವರ್ಷ  ತಾಯಿ ಅಗಲಿಕೆ ನೋವಿನಲ್ಲಿರುವ ಸುದೀಪ್, ‘ ಮನೆ ಬಳಿ ಯಾರೂ ಬಂದು ಅಲ್ಲಿರುವ ಜನರ ಶಾಂತಿ ಭಂಗ ಮಾಡೋದು ಬೇಡ. ಎರಡರ ಬದಲಾಗಿ ಸೆ.1ರ ರಾತ್ರಿ ಸೇರೋಣ’ ಎಂದು ಮನವಿ ಮಾಡಿಕೊಂಡಿದ್ದರು. ಅದರಂತೆ ಇದೀಗ ಸುದೀಪ್ ಆಪ್ತ ಬಳಗ  ಅಭಿಮಾನಿಗಳಿಗೆ  ಸಂದೇಶ ರವಾನೆ ಮಾಡಿದೆ.

ಸುದೀಪ್ ತಾಯಿ ಸರೋಜಮ್ಮ ಅಗಲಿ ಒಂದು ವರ್ಷವೂ  ಕಳೆದಿಲ್ಲ. ಆದರೆ ತಮ್ಮ ಭೇಟಿಗಾಗಿ ಕಾಯುವ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆಗೊಳಿಸಬಾರದು ಎನ್ನುವ ಕಾರಣಕ್ಕೆ  ಕಿಚ್ಚ ಸುದೀಪ್ ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಸುದೀಪ್ ಅವರ ಮನೆ ಮುಂದೆ ಬರ್ತ್​ಡೇ ಆಚರಣೆ ಇರೋದಿಲ್ಲ. ನಂದಿ ಲಿಂಕ್ ಗ್ರೌಂಡ್​ನಲ್ಲಿ ಸೆಪ್ಟೆಂಬರ್ 1ರಿಂದ ರಾತ್ರಿ 9 ಗಂಟೆಗೆ ಸಂಭ್ರಮಾಚರಣೆ ಶುರುವಾಗಲಿದೆ. 12 ಗಂಟೆವರೆಗೆ ಇರಲಿದೆ. ಕೇಕ್ , ಹಾರ ತರಬಾರದು. ಸೆಪ್ಟೆಂಬರ್ 2ರಂದು ಸುದೀಪ್ ಮನೆ ಬಳಿ ಹೋಗಬಾರದು’ ಎಂದು ಕಿಚ್ಚ ಸುದೀಪ್ ಬರ್ತ್​ಡೇ ಪ್ಲ್ಯಾನ್ ಬಗ್ಗೆ ಅವರ ಅಭಿಮಾನಿ ಸಂಘದವರು ಮಾಹಿತಿ ನೀಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!