Kiccha47 ಶೀರ್ಷಿಕೆ ಬಹಿರಂಗ

ಸುದೀಪ್  ಮುಂದಿನ ಚಿತ್ರದ  ಶೀರ್ಷಿಕೆಯನ್ನು ನಿರ್ದೇಶಕ ವಿಜಯ್ ಕಾರ್ತಿಕೇಯ  ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಸುದೀಪ್ ರ ಮುಂದಿನ ಚಿತ್ರವನ್ನು ತಾತ್ಕಾಲಿಕವಾಗಿ ಕಿಚ್ಚಾ47 ಎಂದು ಕರೆಯಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಶೀರ್ಷಿಕೆ ಕುರಿತು ಜೋರಾಗಿ ನಡೆಯುತ್ತಿತ್ತು. ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ  ‘ಮಾರ್ಕ್’ ಶೀರ್ಷಿಕೆ ಟೀಸರ್‌  ನ್ನು ಅಧಿಕೃತವಾಗಿ ಘೋಷಿಸಿದೆ.

ಮ್ಯಾಕ್ಸ್ ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್, ಅಕಾ ಮ್ಯಾಕ್ಸ್ ಪಾತ್ರದಲ್ಲಿ ನಟಿಸಿದ್ದ ಸುದೀಪ್ ಈಗ ಅಜಯ್ ಮಾರ್ಕಂಡಯ್, ಅಕಾ ಮಾರ್ಕ್ ಅವತಾರ ಎತ್ತಿದ್ದಾರೆ. ಚಿತ್ರ 2025ರ ಕ್ರಿಸ್‌ಮಸ್‌ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕಳೆದ ವರ್ಷ ಉಪೇಂದ್ರ ಅವರ UI ಬಿಡುಗಡೆಯಾದ 5 ದಿನಗಳ ನಂತರ ಮ್ಯಾಕ್ಸ್ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈ ವರ್ಷ ದರ್ಶನ್ ಅವರ ‘ದಿ ಡೆವಿಲ್’ ಚಿತ್ರ,  ಅವತಾರ್ ಫ್ರಾಂಚೈಸಿಯ ಮೂರನೇ ಭಾಗ ಮತ್ತು ಅರ್ಜುನ್ ಜನ್ಯ ಅವರ ನಿರ್ದೇಶನದ ಚೊಚ್ಚಲ ಚಿತ್ರ ’45’ ನೊಂದಿಗೆ    ‘ಮಾರ್ಕ್’ ಗೆ ಸಂಭಾವ್ಯ ಘರ್ಷಣೆ ಎದುರಾಗಲಿದೆ. ಆದರೂ ಈ ವರ್ಷವೂ  ‘ಮಾರ್ಕ್’ ಚಿತ್ರತಂಡದವರು ಭರ್ಜರಿ ಹಿಟ್ ಭರವಸೆಯಲ್ಲಿದ್ದಾರೆ.

—-

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!