ತಮಿಳು ರಿಮೇಕ್

ದಾಖಲೆ ಮೊತ್ತಕ್ಕೆ ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕು ಮಾರಾಟ

ಕಡಿಮೆ ಬಜೆಟ್​​ನಲ್ಲಿ ನಿರ್ಮಾಣಗೊಂಡು ಬಾಕ್ಸ್​​ ಆಫೀಸ್​ನಲ್ಲಿ ಕೆಲ ಕೋಟಿ ಕಲೆಕ್ಷನ್ ಮಾಡುತ್ತಿರುವ ‘ಸು ಫ್ರಮ್ ಸೋ’ ಕನ್ನಡ ಚಿತ್ರದ ತಮಿಳು ರಿಮೇಕ್ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ.

ಕನ್ನಡದಲ್ಲಿ 17 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿ ದಕ್ಷಿಣದ ಭಾಷೆಗಳಲ್ಲಿ 60ಕ್ಕೂ ಹೆಚ್ಚುಚಿತ್ರಗಳನ್ನು ವಿತರಿಸಿರುವ ಎನ್.ಎಸ್.ರಾಜ್ ಕುಮಾರ್ ಅವರು, ‘ಸು ಫ್ರಮ್ ಸೋ’ ಚಿತ್ರದ ತಮಿಳು ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅವರ ಚಿತ್ರ ತಂಡ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗವನ್ನು ಅಂತಿಮಗೊಳಿಸುವ ಕೆಲಸ ನಡೆಸುತ್ತಿದೆ. ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬರುವ ನಿರೀಕ್ಷೆ ಇದೆ.

ರಾಜ್ ಬಿ ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್​ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೆಪಿ ತುಮಿನಾಡ್ ನಿರ್ದೇಶಿಸಿ ನಟಿಸಿದ್ದಾರೆ. ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್​ದಾಸ್ ನಟಿಸಿದ್ದಾರೆ. ಜುಲೈ 25, 2025ರಂದು ಕನ್ನಡದಲ್ಲಿ ಬಿಡುಗಡೆ ಆದ ಸಿನಿಮಾ ಆಗಸ್ಟ್ 1ರಂದು ಮಲಯಾಳಂ, ಆಗಸ್ಟ್​ 8ರಂದು ತೆಲುಗಿನಲ್ಲಿ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

2025ರ ಅತ್ಯಂತ ಯಶಸ್ವಿ ಚಿತ್ರ ಎನ್ನುವ ಖ್ಯಾತಿಗೆ ಸು ಫ್ರಮ್ ಸೋ ಪಾತ್ರವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!