ದುಬೈನಲ್ಲಿ ‘ಸು ಫ್ರಮ್ ಸೋ’ ಚಿತ್ರತಂಡದ ಸಂಭ್ರಮ

ಕನ್ನಡ ದಬ್ಲಾಕ್‌ಬಸ್ಟರ್ ಚಿತ್ರ ‘ಸು ಫ್ರಮ್ ಸೋ’ ಚಿತ್ರತಂಡ ಇತ್ತೀಚೆಗೆ ದುಬೈ ಮತ್ತು ಅಬುಧಾಬಿಗೆ ಪ್ರಯಾಣ ಬೆಳೆಸಿ ಚಿತ್ರದ ಯಶಸ್ಸನ್ನು ಆಚರಿಸಿತು.

ದುಬೈನಲ್ಲಿ ನಡೆದ ವಿಶೇಷ ಭೇಟಿ ಮತ್ತು ಶುಭಾಶಯ ವಿನಿಮಯ ಕಾರ್ಯಕ್ರಮದಲ್ಲಿ ನಿರ್ದೇಶಕ, ನಟ ಜೆಪಿ ತುಮಿನಾಡ್, ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್ ಮತ್ತು ಇತರರು ಭಾಗವಹಿಸಿದ್ದರು. ಆಗಸ್ಟ್ 1 ರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದು, ಅಲ್ಲಿನ ವಿವಿಧ ಸಮುದಾಯಗಳ ಪ್ರೇಕ್ಷಕರೊಂದಿಗೆ, ವಿಶೇಷವಾಗಿ ಕನ್ನಡಿಗರು ಮತ್ತು ಮಲಯಾಳಿ ಪ್ರೇಕ್ಷಕರೊಂದಿಗೆ ಶುಭಾಶಯ ವಿನಿಮಯದಲ್ಲಿ ತೊಡಗಿಸಿಕೊಂಡರು.

‘ಸು ಫ್ರಮ್ ಸೋ’ ವಿದೇಶಗಳಲ್ಲಿ 26 ದಿನಗಳ ನಿರಂತರ ಪ್ರದರ್ಶನಗಳನ್ನು ಕಂಡಿದೆ. ತುಮಿನಾಡ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರ  ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ. ಕರ್ನಾಟಕದಲ್ಲಿ ಈ ಚಿತ್ರವು ಉತ್ತಮ ಗಳಿಕೆ ಕಾಣುತ್ತಲೇ ಸಾಗಿದೆ. ವಿಶ್ವದಾದ್ಯಂತ ‘ಸು ಫ್ರಮ್ ಸೋ’ ಕಲೆಕ್ಷನ್ 115 ₹ ಕೋಟಿಗಳನ್ನು ದಾಟಿದೆ. ಗಲ್ಫ್ ದೇಶಗಳಿಂದ  ₹8 ಕೋಟಿ ಸಂಗ್ರಹ ಕಂಡಿದೆ. ಮಲಯಾಳಂ ಮತ್ತು ತೆಲುಗು ಮಾರುಕಟ್ಟೆಗಳಲ್ಲಿ ಭರ್ಜರಿ ಕಲೆಕ್ಷನ್ ತೋರಿಸಿದೆ.

‘ಸು ಫ್ರಮ್ ಸೋ’ ಚಿತ್ರ   ಕೆಜಿಎಫ್ ಮತ್ತು ಕಾಂತಾರದಂತ ಕನ್ನಡ ಬ್ಲಾಕ್‌ಬಸ್ಟರ್‌ಗಳ ಹೆಜ್ಜೆಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಅನುಸರಿಸಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!