‘ಸು ಫ್ರಮ್ ಸೋ’ ಶೋ ಸಂಖ್ಯೆ ಏರಿಕೆ

ದೊಡ್ಡ ಸಿನಿಮಾಗಳ ಮಧ್ಯೆ ಕನ್ನಡ ಸಿನಿಮಾ ‘ಸು ಫ್ರಮ್ ಸೋ’ ಶೋ ಸಂಖ್ಯೆ ಏರಿಕೆ ಆಗಿದೆ.

ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಸಿನಿಮಾ  ಈ ವಾರ ರಿಲೀಸ್ ಆಗಿದೆ. ಅನೇಕ ಕಡೆಗಳಲ್ಲಿ ಪವನ್ ಸಿನಿಮಾ ತೆಗೆದು ‘ಸು ಫ್ರಮ್ ಸೋ’ ಶೋ ಹಾಕಲಾಗಿದೆ.

‘ಅನೇಕ ಕಡೆಗಳಲ್ಲಿ ಮೊದಲ ದಿನ ನಮಗೆ ಒಂದು ಶೋ ಮಾತ್ರ ಕೊಡಲಾಗಿತ್ತು. ಆ ಬಳಿಕ ಅದು ನೇರವಾಗಿ ನಾಲ್ಕಕ್ಕೆ ಏರಿಕೆ ಆಗಿದೆ. ಶೋ ನೀಡಿ ಎಂದು ನಾವು ಕೇಳುತ್ತಿಲ್ಲ. ಜನರ ಬೇಡಿಕೆಗೆ ತಕ್ಕಂತೆ ಅವರೇ ಶೋ ಸಂಖ್ಯೆ ಹೆಚ್ಚಿಸುತ್ತಿದ್ದಾರೆ’ ಎಂದಿದ್ದಾರೆ ನಿರ್ಮಾಪಕ ರಾಜ್​ ಬಿ ಶೆಟ್ಟಿ.

ಕನ್ನಡ ಸಿನಿಮಾಗಳಿಗೆ ಶೋ ಸಿಗಲ್ಲ. ಪರ ಭಾಷೆಯವರು ಬಂದು ನಮ್ಮ ಶೋ ಕಸಿದುಕೊಳ್ಳುತ್ತಾರೆ ಎಂಬಿತ್ಯಾದಿ ಆರೋಪಗಳಿವೆ.  ಆದರೆ ‘ಸು ಫ್ರಮ್ ಸೋ’ ವಿಚಾರದಲ್ಲಿ ಅದು ಉಲ್ಟಾ ಆಗಿದೆ. ಮೊದಲ ದಿನ ಬೆಂಗಳೂರಿನಲ್ಲಿ 78 ಶೋ ಕೊಡಲಾಗಿತ್ತು. ಎಡನೇ ದಿನಕ್ಕೆ ಅದು 210 ಶೋ ಆಗಿದೆ.  ಈ ಮೂಲಕ ಒಂದೇ ದಿನಕ್ಕೆ ಶೋ ಮೂರು ಪಟ್ಟಾಗಿದೆ.

ರಾಜ್ ಬಿ ಶೆಟ್ಟಿ ಅವರು ಈ ಬಾರಿ ಸಿನಿಮಾ ರಿಲೀಸ್​ಗೆ 4-5 ದಿನ ಇರುವಾಗಲೇ ಜನರಿಗೆ ಸಿನಿಮಾ ತೋರಿಸಿದ್ದಾರೆ. ಸಿನಿಮಾ ನೋಡುವಾಗ ಜನರ ಭಾವನೆಯನ್ನು ಕ್ಯಾಪ್ಚರ್ ಮಾಡಿ ಅದನ್ನು ಜನರ ಮುಂದಿಡುವ ಕೆಲಸ ಮಾಡಿದ್ದಾರೆ. ಈ ತಂತ್ರ ಕೆಲಸ ಮಾಡಿ ಜನ ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬಾಯ್ಮಾತಿನ ಪ್ರಚಾರ ನೀಡಿದ್ದಾರೆ.

ಮೊದಲ ದಿನ ‘ಸು ಫ್ರಮ್ ಸೋ’ ದ 73 ಸಾವಿರ ಟಿಕೆಟ್ ಮಾರಾಟ ಆಗಿದೆ ಎಂದು ರಾಜ್​ ಬಿ ಶೆಟ್ಟಿ  ಮಾಹಿತಿ ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!