ಕಠಿಣ ನಿಯಮದಿಂದ ಸುಸ್ತಾದ ದರ್ಶನ್

ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ  ದರ್ಶನ್  ಜೈಲಿನ ಕಠಿಣ ನಿಯಮದಿಂದ ಎರಡೇ ದಿನಕ್ಕೆ ಸುಸ್ತಾಗಿದ್ದಾರೆ.

ದರ್ಶನ್ ಜಾಮೀನನ್ನು  ಸುಪ್ರೀಂ ಕೋರ್ಟ್  ರದ್ದು ಮಾಡಿದೆ.  ದರ್ಶನ್​ಗೆ ಯಾವುದೇ ಐಷಾರಾಮಿ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ. ಈ ಕಾರಣದಿಂ ದರ್ಶನ್ ಜೈಲಿನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

ಈ ಬಾರಿ ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಅಧಿಕಾರಿಗಳು ದರ್ಶನ್​ನ್ನು ನಡೆಸಿಕೊಳ್ಳುತ್ತಿದ್ದಾರೆ. ಮನೆಯಿಂದ ಯಾವುದೇ ಊಟವನ್ನು ತರುವಂತಿಲ್ಲ. ಜೈಲಿನ  ಮೆನುವಿನಂತೆ ಊಟ-ತಿಂಡಿ ನೀಡಲಾಗುತ್ತಿದೆ. ಕಳೆದ ಬಾರಿ ಮನೆ ಊಟದ ವ್ಯವಸ್ಥೆ ಇತ್ತು. ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ.

ದರ್ಶನ್ ಎರಡು ಬೆಡ್​ಶೀಟ್ ಕೇಳಿದ್ದಾರೆ. ಆದರೆ ಜೈಲಿನ ಮ್ಯಾನ್ಯುಯಲ್ ಪ್ರಕಾರ ಒಂದೇ ಬೆಡ್​ ಶೀಟ್ ನೀಡಲಾಗಿದೆ. ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಕ್ವಾರಂಟೈನ್ ಸೆಲ್​ನಲ್ಲಿ ಇದ್ದಾರೆ. ಆ ಬಳಿಕ ಅವರನ್ನು ಮುಖ್ಯ ಸೆಲ್​ಗೆ ವರ್ಗಾವಣೆ ಮಾಡಲಾಗುತ್ತದೆ.

ದರ್ಶನ್​ ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಅವರಿಗೆ ಐಷಾರಾಮಿ ಸವಲತ್ತು ಒದಗಿಸಲಾಯಿತು. ಇದರ ಫೋಟೋಗಳು  ವೈರಲ್ ಆದವು. ಈ ಪ್ರಕರಣದಲ್ಲಿ ಕೇಸ್  ದಾಖಲಾಗಿದೆ. ಈ ವಿಚಾರಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ದರ್ಶನ್​ಗೆ ಯಾವುದೇ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!