ಕ್ರೈಂ – ಥ್ರಿಲ್ಲರ್ ಕಥಾ ವಸ್ತುವಿನೊಂದಿಗೆ ಪ್ರೇಕ್ಷಕರಿಗೆ ಕುತೂಹಲ ಹೆಜ್ಜೆ ಹೆಜ್ಜೆಗೆ ನೀಡಲು ‘ಸ್ಟ್ರೈಕರ್’ ಗರುಡಾದ್ರಿ ಆರ್ಟ್ಸ್ ಅಡಿಯಲ್ಲಿ 59 ದಿವಸಗಳ ಮಾತಿನ ಭಾಗದ ಚಿತ್ರೀಕರಣ ಹಾಗೂ ಎರಡು ಹಾಡಿನ ಚಿತ್ರೀಕರಣ ಸಂಪೂರ್ಣ ಮಾಡಿಕೊಂಡು ಸಿದ್ದವಾಗುತ್ತಿದೆ. ಇದು ಪೊಲೀಸ್ ವರ್ಸಸ್ ಕ್ರಿಮಿನಲ್ ಸುತ್ತ ತಿರುಗುವ ಚಿತ್ರ. ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಯಾರು ಯಾವಾಗ ಎದುರಾಗುತ್ತಾರೆ, ಯತಕ್ಕಾಗಿ ಎಂಬುದನ್ನೂ ನಿರ್ದೇಶಕರು ಚಿತ್ರಕತೆಯಲ್ಲಿ ವಿವರಿಸುತ್ತಾ ಹೋಗುತ್ತಾರೆ.
ಜಿ ಶಂಕರಪ್ಪ, ರಮೇಶ್ ಬಾಬು ಹಾಗೂ ಸುರೇಶ್ ಬಾಬು ಅವರ ನಿರ್ಮಾಣದ ಈ ಚಿತ್ರದಲ್ಲಿ ಎರಡು ಹಾಡುಗಳಿವೆ. ಬೆಂಗಳೂರಿನ ಸುತ್ತ ಮುತ್ತ, ಯಲಹಂಕ, ಜಿ ಕ ವಿ ಕೆ ಕ್ಯಾಂಪಸ್, ಕಂಠೀರವ ಸ್ಟುಡಿಯೋ, ಟೋರಿನೊ ಖರ್ಖಾನೆ ಚಿತ್ರೀಕರಣವಾದ ಸ್ಥಳಗಳು.
ಜನಪ್ರಿಯ ಕಿರುತೆರೆ ನಟ ಪ್ರವೀಣ್ ತೇಜ್ ಸಿಂಪಲ್ ಆಗಿ ಇನ್ನೋಂದ್ ಲವ್ ಸ್ಟೋರಿ ಮೂಲಕ ನಾಯಕ ಆಗಿ ಮಿಂಚಿದವರು ಈ ಚಿತ್ರದ ಕಥಾ ನಾಯಕ, ಭಜರಂಗಿ ಲೋಕಿ ಖಳ ನಾಯಕ, ಶಿಲ್ಪಾ ಮಂಜುನಾಥ್ ನಾಯಕಿ. ಶರ್ಮ, ಧರ್ಮಣ್ಣ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ರಾಕೇಶ್ ವೈ ಛಾಯಾಗ್ರಹಣ, ಭಾರತ್ ಬಿ ಜೆ ಸಂಗೀತ, ಕೆ ಕಲ್ಯಾಣ್, ಸಿಂಪಲ್ ಸುನಿ ತಲಾ ಒಂದು ಗೀತೆ ರಚಿಸಿದ್ದಾರೆ. ಅದನ್ನು ವಿಜಯ ಪ್ರಕಾಷ್ ಹಾಗೂ ಸುಪ್ರಿಯ ಲೋಹಿತ್ ಕಂಠದಲ್ಲಿ ಧ್ವನಿ ಮುದ್ರಿಸಿಕೊಳ್ಳಲಾಗಿದೆ. ವಂಶಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಿರುವರು.
Pingback: Regression Testing