‘ಅಖಂಡ 2’ ಬಿಡುಗಡೆಗೆ ಮತ್ತೆ ತಡೆ

ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಚಿತ್ರ ಬಿಡುಗಡೆಗೆ ಮತ್ತೆ ತಡೆ ಉಂಟಾಗಿದ್ದು, ಡಿಸೆಂಬರ್ 11 ರಾತ್ರಿ ಪ್ರಾರಂಭವಾಗಬೇಕಿದ್ದ ಪ್ರೀಮಿಯರ್ ಶೋಗಳು ತೆಲಂಗಾಣದಲ್ಲಿ ರದ್ದಾಗಿದೆ.

ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ‘ಅಖಂಡ 2’ ಚಿತ್ರಕ್ಕೆ ವಿಶೇಷ ಸೌಲಭ್ಯಗಳನ್ನು ಘೋಷಿಸಿ ಟಿಕೆಟ್ ದರ ಹೆಚ್ಚಳ ಮತ್ತು ಪ್ರೀಮಿಯರ್ ಶೋಗಳಿಗೆ ಅನುಮತಿ ನೀಡಿದ್ದವು. ತೆಲಂಗಾಣದಲ್ಲಿ ಡಿಸೆಂಬರ್ 12ರಿಂದ 14ರವರೆಗೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ₹50 ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ₹100 ಹೆಚ್ಚುವರಿ ಟಿಕೆಟ್ ದರಕ್ಕೆ ಆದೇಶ ಹೊರಡಿಸಲಾಗಿತ್ತು. ಪ್ರೀಮಿಯರ್ ಶೋಗಳಿಗೆ  ₹600 ನಿಗದಿಪಡಿಸಲಾಗಿತ್ತು.

ಆದರೆ   ತೆಲಂಗಾಣ ಹೈಕೋರ್ಟ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ. ವಕೀಲ ಶ್ರೀನಿವಾಸ್ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೈದ ನ್ಯಾಯಾಲಯ, ಪ್ರೀಮಿಯರ್ ಶೋಗಳ ಟಿಕೆಟ್ ದರ ಹೆಚ್ಚಳಕ್ಕೆ ತಡೆ ನೀಡಿದೆ. ಈ ಆದೇಶ ‘ಅಖಂಡ 2’ ಮಾತ್ರವಲ್ಲ, ಇತರ ಚಿತ್ರಗಳಿಗೂ ಅನ್ವಯಿಸಲಿದೆ.

‘ಅಖಂಡ 2’ ಪ್ರೀಮಿಯರ್ ಶೋಗಳು ತೆಲಂಗಾಣದಲ್ಲಿ ರದ್ದಾಗಿದ್ದು, ಮೊದಲ ವಾರಾಂತ್ಯದ ಟಿಕೆಟ್ ದರ ಹೆಚ್ಚಳವೂ ಅನಿಶ್ಚಿತವಾಗಿದೆ. ‘ಅಖಂಡ 2’ ಚಿತ್ರ ಡಿ.5ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್‌ ವಿರುದ್ಧ ಇರುವ ಹಳೆಯ ಕೇಸ್ ಹಿನ್ನೆಲೆ ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಯನ್ನು ತಡೆದಿತ್ತು.  ವಿವಾದ ಬಗೆಹರಿಯುತ್ತಿದ್ದಂತೆ ಚಿತ್ರವನ್ನು   ಡಿಸೆಂಬರ್ 12ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಆರಂಭಿಸಿತ್ತು.

2021ರ ಬ್ಲಾಕ್‌ಬಸ್ಟರ್ ‘ಅಖಂಡ’ ಚಿತ್ರದ ಸೀಕ್ವೆಲ್  ‘ಅಖಂಡ 2’ ಆಗಿದೆ. ಬೊಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರ  ಟೀಸರ್, ಟ್ರೈಲರ್ ಮುಖಾಂತರ  ಕುತೂಹಲ ಮೂಡಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!