ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಬಳಸದಂತೆ ಕೇರಳದ ಕೋಯಿಕ್ಕೊಡು ಕೋರ್ಟ್ ಆದೇಶ ನೀಡಿದೆ.
ಹಾಡಿನ ಮೇಲೆ ಕೇರಳದ ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಮಲಯಾಳಂ ಆಲ್ಬಮ್ ನಿಂದ ಈ ಹಾಡನ್ನು ಕಾಪಿ ಮಡಲಾಗಿದೆ ಎಂದು ದೂರಿತ್ತು. ಈಗ ಕೇರಳದ ಕೋಯಿಕ್ಕೊಡು ಕೋರ್ಟ್ ಈ ಹಾಡಿನ ಬಳಕೆಗೆ ನಿಷೇಧ ಹೇರಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೈಕುಡಂ ಬ್ರಿಡ್ಜ್ ಅನುಮತಿ ಇಲ್ಲದೆ ಈ ಹಾಡನ್ನು ಬಳಸುವಂತಿಲ್ಲ ಎಂದು ಆದೇಶ ನೀಡಿದೆ.
ನವರಸಂ ಸಂಗೀತವನ್ನು ವರಾಹ ರೂಪಂ ಹಾಡು ಹಾಡಿನಲ್ಲಿ ಕದಿಯಲಾಗಿದೆ ಎಂದು ತೈಕುಡಂ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿತ್ತು.
ಕಾಂತಾರ ಸಿನಿಮಾದಲ್ಲಿ ಜನರಿಗೆ ಕ್ಲೈಮ್ಯಾಕ್ಸ್ ಇಷ್ಟ ಆಗಿತ್ತು. ದೈವದ ರೂಪದಲ್ಲಿ ಅಬ್ಬರಿಸಿದ ಬಳಿಕ ಕೊನೆಯಲ್ಲಿ ವರಾಹ ರೂಪಂ ಹಾಡು ಬರುತ್ತದೆ.
ಕಾಂತಾರಾ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು, ಹಾಡನ್ನು ಕದಿಯಲಾಗಿಲ್ಲ. ಇಲ್ಲಿ ಸಾಮ್ಯತೆ ಇರಬಹುದು ಅಷ್ಟೇ ಎಂದು ಹೇಳಿದ್ದರು.
___

Be the first to comment